ನವದೆಹಲಿ: ಆಗಸ್ಟ್ 15 ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಗೂಗಲ್ ನೇರ ಪ್ರಸಾರ ಮಾಡಲು ನಿರ್ಧಾರ ಮಾಡಿದೆ.
ಡಿಜಿಟಲ್ ಯೋಜನೆಯ ಮೂಲಕ ವೀಕ್ಷಕರನ್ನು ಸೆಳೆಯಲು ಗೂಗಲ್ ಸಂಸ್ಥೆ ಪ್ರಸಾರ ಭಾರತಿ ಸಹಯೋಗದೊಂದಿಗೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಲೈವ್ ಸ್ಟ್ರೀಮ್ ಮಾಡಲು ಮುಂದಾಗಿದೆ. ಹೀಗಾಗಿ ತನ್ನ ಗೂಗಲ್ ಸರ್ಚ್‍ಪೇಜಿನ ಮುಖ್ಯ ಪುಟದಲ್ಲಿ ಮತ್ತು ಯುಟ್ಯೂಬ್‍ನಲ್ಲಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.
Advertisement
This time you can find PM @narendramodi's #IndependenceDay speech #YouTube live stream on #Google search: Prasar Bharati CEO @shashidigital tells #DDNews https://t.co/2bNCK3jusg pic.twitter.com/rqTSBOfGdq
— DD News (@DDNewslive) August 14, 2018
Advertisement
ಈಗಾಗಲೇ ಮೋದಿ ಭಾಷಣ ಸಾಕಷ್ಟು ವೀಕ್ಷಕರನ್ನು ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಮತ್ತಷ್ಟು ವೀಕ್ಷಕರನ್ನು ಸೆಳೆಯಲು ಗೂಗಲ್ ಹೋಮ್ ಪೇಜ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ನೇಮಕವಾದಾಗ ಗೂಗಲ್ ತನ್ನ ಹೋಮ್ ಪೇಜ್ ನಲ್ಲಿ ಮೊದಲ ಬಾರಿಗೆ ಕಾರ್ಯಕ್ರಮವನ್ನು ಲೈವ್ ಮಾಡಿತ್ತು.
Advertisement
ಈ ಕುರಿತು ಪ್ರಸಾರ ಭಾರತಿಯ ಮುಖ್ಯಸ್ಥರಾದ ಶಶಿ ಶೇಖರ್ ವೆಂಪತಿಯವರು ಮಾತನಾಡಿ, ಡಿಜಿಟಲ್ ಕ್ಷೇತ್ರವನ್ನು ಉತ್ತೇಜನಗೊಳಿಸಲು ಗೂಗಲ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಇದಲ್ಲದೇ ವೀಕ್ಷಕರು ಕೆಂಪುಕೋಟೆಯ ಎಲ್ಲಾ ಸಮಾರಂಭಗಳನ್ನು ನಮ್ಮ ದೂರದರ್ಶನದ ಮೂಲಕವು ಸಹ ವೀಕ್ಷಣೆ ಮಾಡಬಹುದಾಗಿದೆ. ಇದರ ಚಿತ್ರೀಕರಣಕ್ಕೆ ಸುಮಾರು 22 ಕ್ಕೂ ಹೆಚ್ಚಿನ ಹೆಚ್‍ಡಿ ಕ್ಯಾಮೆರಾಗಳನ್ನು ಈಗಾಗಲೇ ಸಿದ್ದಪಡಿಸಿಕೊಳ್ಳಲಾಗಿದೆ. ದೇಶದ 22 ಭಾಷೆಗಳಲ್ಲಿ ನೇರಪ್ರಸಾರಗೊಳ್ಳುತ್ತದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv