ಬೆಂಗಳೂರು: ದುಬೈನಿಂದ ಬಂದು ಬೆಂಗಳೂರಿನಲ್ಲಿ ಮೃತಪಟ್ಟ ಗಗನಸಖಿ (Air Hostess) ಅರ್ಚನಾ ಕೊಲೆ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ಪೊಲೀಸರು ಆಕೆಯ ಬಾಯ್ಫ್ರೆಂಡ್ ಆದೇಶ್ (Adesh) ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
Advertisement
ಕೊಲೆಗೈದಿದ್ದು ಯಾಕೆ?: ಮದುವೆ ಆಗಲು ಒಪ್ಪದಿದ್ದರೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸುತ್ತೇನೆ ಎಂದು ಅರ್ಚನಾ ಈ ಹಿಂದೆ ಬೆದರಿಕೆ ಹಾಕಿದ್ದಳು. ಆ ಬಳಿಕ ಮೃತಪಟ್ಟ ದಿನವೂ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ವಾಗ್ವಾದ ನಡೆದವು. ಇದರಿಂದ ಸಿಟ್ಟಿಗೆದ್ದ ನಾನು ಆಕೆಯನ್ನು ಬಾಲ್ಕನಿಯಿಂದ ತಳ್ಳಿ ಹತ್ಯೆ ಮಾಡಿದೆ ಎಂದು ಆದೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬಾಯ್ಫ್ರೆಂಡ್ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್
Advertisement
Advertisement
ಹಿಮಾಚಲಪ್ರದೇಶ ಮೂಲದ ಗಗನಸಖಿ ಅರ್ಚನಾ ಧೀಮನ್ (28) ಕೋರಮಂಗಲ (Koramangala) ದ 8ನೇ ಬ್ಲಾಕ್ನ ರೇಣುಕಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ನ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿತ್ತು. ಆದರೆ ಅರ್ಚನಾ ಮೃತಪಟ್ಟ ಬಳಿಕ ಆಕೆಯ ಬಾಯ್ಫ್ರೆಂಡ್ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ತಿರುವು ದೊರೆಯಿತು. ಇದನ್ನೂ ಓದಿ: ಗಗನಸಖಿ ಗೆಳತಿಯನ್ನು ಅಪಾರ್ಟ್ಮೆಂಟ್ನಿಂದ ತಳ್ಳಿ ಆತ್ಮಹತ್ಯೆ ನಾಟಕವಾಡಿದ್ದ ಟೆಕ್ಕಿ ಅರೆಸ್ಟ್