ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮದಿನದ ಪ್ರಯುಕ್ತ ಮಾರ್ಚ್ 31 ರಂದು ಮಧ್ಯಾಹ್ನ 3:30ಕ್ಕೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆಶಿ, ಮಾರ್ಚ್ 31 ರಂದು ರಾಹುಲ್ ಗಾಂಧಿ ಎರಡು ಗಂಟೆಗೆ ಬೆಂಗಳೂರಿಗೆ ಬರ್ತಾರೆ. ಮೂರುವರೆ ಗಂಟೆಗೆ ಮಠಕ್ಕೆ ಭೇಟಿ ಕೊಡ್ತಾರೆ. ಅಲ್ಲೆ ಪ್ರಸಾದ ಸ್ವೀಕಾರ ಮಾಡ್ತಾರೆ ಎಂದು ಮಾಹಿತಿ ಕೊಟ್ಟರು. ಇದನ್ನೂ ಓದಿ: ಟಿಪ್ಪು ಬಗ್ಗೆ ಶೃಂಗೇರಿ ಮಠಕ್ಕೆ ಹೋಗಿ ಕೇಳಲಿ ಕೊಲ್ಲೂರಿನಲ್ಲಿ ತಿಳಿದುಕೊಳ್ಳಲಿ: ಡಿಕೆಶಿ
ಹಿಂದುತ್ವ ಕಾಂಗ್ರೆಸ್‍ಗೆ ಹೊಸದಲ್ಲ. ನಾವೆಲ್ಲಾ ಹಿಂದೂಗಳೇ ತಾನೇ? ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ, ಜೈಪುರ ಸಮಾವೇಶದಲ್ಲಿ ಇದನ್ನೇ ತಾನೇ ಹೇಳಿದ್ದು? ಆದರೆ, ಧರ್ಮ ಜಾತಿಯ ಆಧಾರದ ಮೇಲೆ ಸಮಾಜವನ್ನು ಒಡೆಯುವುದು ಸರಿಯಲ್ಲ. ಇದನ್ನು ಜನ ನೋಡುತ್ತಿದ್ದಾರೆ ಎಂದು ಎಚ್ಚರಿಸಿದರು.
ಗಾಂಧಿ ಕುಟುಂಬಕ್ಕೂ ಹಾಗೂ ಮಠಗಳಿಗೆ ಹಲವಾರು ವರ್ಷಗಳ ಸಂಬಂಧವಿದೆ. ರಾಜೀವ್ ಗಾಂಧಿ ಶೃಂಗೇರಿಯಲ್ಲಿ ವಟರಗಟ್ಟಲೆ ಹೋಮ-ಹವನ ಮಾಡಿದ್ದರು. ಇಂದಿರಾ ಗಾಂಧಿ ಅವರು ಶೃಂಗೇರಿಯಿಂದ ಕೈ ಗುರುತು ತಗೆದುಕೊಂಡು ಹೋಗಿದ್ದರು. ಯಾವುದನ್ನು ಮರೆ ಮಾಚಲು ಸಾಧ್ಯವಿಲ್ಲ. ಬಿಜೆಪಿ ಅವರು ಹೈಜಾಕ್ ಮಾಡುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಹಿಂದೂ ಹಾಗೂ ಹಿಂದುತ್ವಕ್ಕೆ ರಾಹುಲ್ ಗಾಂಧಿ ಅವರು ಜೈಪುರದಲ್ಲಿ ಉತ್ತರ ಕೊಟ್ಟಿದ್ದಾರೆ. ತುಮಕೂರಿನಿಂದ ವಾಪಸ್ ಬಂದ ಬಳಿಕ ಕಾಂಗ್ರೆಸ್ ಕಚೇರಿಗೆ ಭೇಟಿ ಕೊಡ್ತಾರೆ. ಅಂದು ಬಿಬಿಎಂಪಿ ವ್ಯಾಪ್ತಿಯ ನಾಯಕರಿಗೆ ಸಂಬಂಧಿಸಿದಂತೆ ಸಭೆ ಮಾಡಲಾಗುತ್ತದೆ. ಶಾಸಕರು, ಮಾಜಿ ಶಾಸಕರ ಸೋತ ಅಭ್ಯರ್ಥಿಗಳ ಜೊತೆ ಸಭೆ ಮಾಡ್ತಾರೆ. ಸದಸ್ಯತ್ವ ಮಾಡಿಸುವಲ್ಲಿ ಯಾರೆಲ್ಲ ಆಕ್ಟಿವ್ ಇದ್ದಾರೆ. ಅವರ ಜೊತೆ ಜೂಮ್ ಮೂಲಕ ಸಭೆ ಮಾಡ್ತಾರೆ. ಆಕ್ಟಿವ್ ಇದ್ದವರನ್ನು ಜೂಮ್‍ನಲ್ಲಿ ಭಾಗಿಯಾಗುವರು ಎಂದು ತಿಳಿಸಿದರು.