ಬೆಂಗಳೂರು: ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ರವೀಂದ್ರ ಕಲಾಕ್ಷೇತ್ರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಪ್ರಪ್ರಥಮ ಬಾರಿಗೆ ರವೀಂದ್ರ ಕಲಾಕ್ಷೇತ್ರ ಆಡಳಿತ ಮಂಡಳಿ ಕಲಾಕ್ಷೇತ್ರದ ಆವರಣದಲ್ಲಿ ಮದುವೆಗೆ ಅವಕಾಶ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಲಾಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ವಿವಾಹ ಮಹೋತ್ಸವವೊಂದು ಜರುಗಿದೆ. ರಂಗಕರ್ಮಿ ಶಿವು ಹಾಗೂ ಪೂಜಾ ವಿವಾಹ ಮಹೋತ್ಸವಕ್ಕೆ ನೀತಿ ನಿಯಮ ಉಲ್ಲಂಘಿಸಿ ಅವಕಾಶ ಮಾಡಿಕೊಡಲಾಗಿದೆ. ಕಲಾವಿದರು, ಸ್ನೇಹಿತರು, ಸಂಬಂಧಿಗಳ ಸಮ್ಮುಖದಲ್ಲಿ ಇಂದು ಶಿವು ಹಾಗೂ ಪೂಜಾ ವಿವಾಹ ನೆರವೇರಿದೆ. ಬಿಂಕ ಬಿನ್ನಾಣರ ಕಲಾ ತಂಡದಿಂದ ಈ ಮದುವೆ ಆಯೋಜಿಸಲಾಗಿತ್ತು. ವಿವಾಹದಲ್ಲಿ ನೂರಾರು ಜನ ಭಾಗಿಯಾಗಿದ್ರು.
ಕಲಾವಿದರ ಒತ್ತಾಯಕ್ಕೆ ಮಣಿದು ಆಡಳಿತ ಮಂಡಳಿ ಮದುವೆಗೆ ಅವಕಾಶ ನೀಡಿದೆ ಎನ್ನಲಾಗಿದೆ. ರಂಗಕರ್ಮಿ ಶಿವು ಆಸೆಯಂತೆ ಸರಳ ವಿವಾಹಕ್ಕೆ ಅವಕಾಶ ಮಾಡಿಕೊಟ್ಟ ಆಡಳಿತ ಮಂಡಳಿ ಕ್ರಮಕ್ಕೆ ಸಾಹಿತ್ಯ ವಲಯದಲ್ಲಿ ತೀವ್ರ ಅಪಸ್ವರ ವ್ಯಕ್ತವಾಗಿದೆ.