ವಾಷಿಂಗ್ಟನ್: ವಿಶ್ವದಲ್ಲೇ ಮೊದಲ ಬಾರಿಗೆ ತಂದೆಯೊಬ್ಬರು ಮಗುವಿಗೆ ಎದೆ ಹಾಲುಣಿಸಿದ ಅಪರೂಪದ ಸಂಗತಿಯೊಂದು ಅಮೆರಿಕದಲ್ಲಿ ನಡೆದಿದೆ.
ಮ್ಯಾಕ್ಸಮಿಲಿಯನ್ ನ್ಯೂಬೌಯರ್ ಮಗುವಿಗೆ ಎದೆ ಹಾಲುಣಿಸಿದ ತಂದೆ. ನ್ಯೂಬೌಯರ್ ಪತ್ನಿ ಏಪ್ರಿಲ್ ನ್ಯೂಬೌಯರ್ ಸಿ- ಸೆಕ್ಷನ್ ಶಸ್ತ್ರಚಿಕಿತ್ಸೆ(ಮಗು ಅಥವಾ ತಾಯಿಯನ್ನು ಉಳಿಸುವ ಸಂದರ್ಭದಲ್ಲಿ ಮಾಡುವ ಶಸ್ತ್ರಚಿಕಿತ್ಸೆ) ಮಾಡಿಸಿಕೊಂಡಿದ್ದರು. ಈ ಶಸ್ತ್ರಚಿಕಿತ್ಸೆ ನಂತರ ಏಪ್ರಿಲ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ತಮ್ಮ ಹೆಣ್ಣು ಮಗುವಿಗೆ ಎದೆ ಹಾಲುಣಿಸಲು ಸಾಧ್ಯವಿರಲಿಲ್ಲ. ಆಗ ನ್ಯೂಬೌಯರ್ ವೈದ್ಯರ ಸಲಹೆ ಪಡೆದು ತನ್ನ ಮಗಳಿಗಾಗಿ ಎದೆ ಹಾಲುಣಿಸಿದ್ದಾರೆ.
Advertisement
ನ್ಯೂಬೌಯರ್ ತನ್ನ ಮಗಳಿಗೆ ಎದೆ ಹಾಲುಣಿಸುತ್ತಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, “ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯಿಂದ ನನ್ನ ಪತ್ನಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ವೈದ್ಯರು ನನಗೆ ಈ ಸಲಹೆ ನೀಡಿದ್ದರು. ಹಾಗಾಗಿ ನಾನು ಮೊದಲ ಬಾರಿಗೆ ನನ್ನ ಮಗಳಿಗೆ ಎದೆ ಹಾಲುಣಿಸುತ್ತಿದ್ದೇನೆ. ತಾಯಿಯರಿಗೋಸ್ಕರ ನಾನು ಈ ಕೆಲಸ ಮಾಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಬಾಣಂತಿ ಏಪ್ರಿಲ್‍ಗೆ ಪಿಸಿಒಡಿ ಕಾಯಿಲೆ ಇದ್ದಿದ್ದರಿಂದ ಆಕೆ ಗರ್ಭಿಣಿ ಆಗಿದ್ದ ಸಂದರ್ಭದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಅಲ್ಲದೇ ಡೆಲಿವರಿ ಸಮಯದಲ್ಲೂ ಆಕೆ ಹಲವು ಶಸ್ತ್ರ ಚಿಕಿತ್ಸೆಗೆ ಒಳಗೊಂಡಿದ್ದಳು. ಏಪ್ರಿಲ್ ತನ್ನ ಮಗಳಿಗೆ ಎದೆ ಹಾಲುಣಿಸಲು ನಿರ್ಧರಿಸಿದ್ದಳು. ಆದರೆ ಆರೋಗ್ಯದಲ್ಲಿ ಏರುಪೇರಾಗಿದ್ದ ಕಾರಣ ನ್ಯೂಬೌಯರ್ ಇಂಜೆಕ್ಷನ್ ಮೂಲಕ ಎದೆಗೆ ಸಣ್ಣ ಪೈಪ್ ಅನ್ನು ಅಳವಡಿಸಿ ಮಗುವಿಗೆ ಹಾಲನ್ನು ಉಣಿಸಿದ್ದರು.
Advertisement
ಸದ್ಯ ನ್ಯೂಬೌಯರ್ ತನ್ನ ಮಗಳಿಗೆ ಎದೆ ಹಾಲುಣಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ನ್ಯೂಬೌಯರ್ ತನ್ನ ಮಗಳಿಗೆ ಪ್ರೀತಿಯಿಂದ ತಾಯಿಯ ರೀತಿಯಲ್ಲೇ ಎದೆ ಹಾಲುಣಿಸುತ್ತಿರುವುದನ್ನು ನೋಡಿ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ನ್ಯೂಬೌಯರ್ ನ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.