ವಿಶ್ವಕಪ್ ಟಿ20 – ಫಸ್ಟ್ ಟೈಂ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

Public TV
1 Min Read
Womens T20 World Cup

ಸಿಡ್ನಿ: ಇದೇ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲಿಗೆ ಟೀ ಇಂಡಿಯಾ ಪ್ರವೇಶಿಸಿದೆ.

ಸಿಡ್ನಿಯಲ್ಲಿ ಭಾರತೀಯ ಕಾಲಮಾನ ಇಂದು ಬೆಳಗ್ಗೆ 9:30ಕ್ಕೆ ಪಂದ್ಯ ಆರಂಭಗೊಳ್ಳಬೇಕಿತ್ತು. ಆದರೆ ಭಾರೀ ಮಳೆಯಿಂದ ಇಂಗ್ಲೆಂಡ್, ಭಾರತದ ಮಧ್ಯೆ ನಡೆಯಬೇಕಿದ್ದ ಸೆಮಿಫೈನಲ್ ಪಂದ್ಯವನ್ನು ರದ್ದುಗೊಳಿಸಲಾಯಿತು.

ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಅಂಕ ಪಟ್ಟಿ ಮತ್ತು ನೆಟ್ ರನ್ ರೇಟ್ ಆಧಾರದಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. 2009 ರಿಂದ ಆರಂಭಗೊಂಡು ಇಲ್ಲಿಯವರೆಗೆ 7 ಟೂರ್ನಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಫೈನಲಿಗೆ ಎಂಟ್ರಿಯಾಗಿದೆ.

ಲೀಗ್ ಹಂತದ ಎಲ್ಲ 4 ಪಂದ್ಯಗಳನ್ನು ಗೆದ್ದು ಭಾರತ 8 ಅಂಕ ಸಂಪಾದಿಸಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತ್ತು. ಇತ್ತ ಇಂಗ್ಲೆಂಡ್ 1 ಪಂದ್ಯ ಸೋತು 3 ಪಂದ್ಯಗಳನ್ನು ಗೆಲ್ಲುವ ಮೂಲಕ 6 ಅಂಕ ಸಂಪಾದಿಸಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿತ್ತು.

India Women WT20 AP 571 855

ಇಂದು ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೆಯಲಿದೆ. ಇದೇ ಸಿಡ್ನಿ ಮೈದಾನದಲ್ಲಿ ನಡೆಯಲಿದ್ದು ಮಳೆ ಬಂದು ಪಂದ್ಯ ರದ್ದಾದರೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಲಿದೆ.

ಲೀಗ್ ನಲ್ಲಿ ಒಂದು ಪಂದ್ಯ ರದ್ದು, 3 ರಲ್ಲಿ ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ 7 ಅಂಕ ಪಡೆದುಕೊಂಡಿದ್ದರೆ, ಆಸ್ಟ್ರೇಲಿಯಾ 3 ಪಂದ್ಯ ಗೆಲ್ಲುವ ಮೂಲಕ 6 ಅಂಕ ಸಂಪಾದಿಸಿದೆ. ಮಾರ್ಚ್ 8 ಭಾನುವಾರ ಮೆಲ್ಬರ್ನ್ ನಲ್ಲಿ ಭಾರತೀಯ ಕಾಲಮಾನ 12:30ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

Womens T20

Share This Article
Leave a Comment

Leave a Reply

Your email address will not be published. Required fields are marked *