ಕಾರವಾರ: ಉತ್ತರ ಕನ್ನಡ(Uttara Kannada) ಜಿಲ್ಲೆಯ ಕಾರವಾರದಲ್ಲಿ(Karwar) ನಡೆದ ಮಾಕ್ ಡ್ರಿಲ್‌ನಲ್ಲಿ ಇದೇ ಮೊದಲ ಬಾರಿಗೆ ಫೈರ್ ಬೋಟ್(ಫೈರ್ ರೋಬಟ್)ನನ್ನು ಬಳಕೆ ಮಾಡಲಾಗಿದೆ.
ನೌಕಾದಳದ ಸುಪರ್ದಿಯಲ್ಲಿ ಇರುವ ಈ ಫೈರ್ ರೋಬೋಟ್(Fire Robot) ಇದೇ ಮೊದಲ ಬಾರಿಗೆ ಮುದುಗಾದ ನೇವಿ ಸಿವಿಲಿಯನ್ ಕಾಲೋನಿಯಲ್ಲಿ ನಡೆದ ಬೆಂಕಿ ಅನಾಹುತವನ್ನು ತಡೆಯಲು ಈ ಫೈರ್ ರೋಬೋಟ್ ಬಳಕೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ
ಇದರ ಉಸ್ತುವಾರಿ ಹೊತ್ತಿರುವ ನೌಕಾದಳದ ಫೈರ್ ಸ್ಟೇಷನ್ ಆಫೀಸರ್ ಸುಭಾಷ್ ನಾಯ್ಕ್ರವರು ನೇವಿ ಸಿವಿಲಿಯನ್ ಕಾಲೋನಿಯಲ್ಲಿ ಇದರ ಪ್ರಾತಕ್ಷಿಕೆ ನೀಡಿದರು. ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್ ಬ್ಲ್ಯಾಕ್‌ಮೆಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ
ವಿಶೇಷತೆ ಏನು?
ಸ್ವದೇಶಿ ನಿರ್ಮಿತ ಟಾಟಾ ಕಂಪನಿಯ ಈ ಫೈರ್ ಬೋಟ್(ಫೈರ್ ರೋಬೋಟ್) ಇಂಧನ ರಹಿತವಾಗಿ ಕಾರ್ಯ ನಿರ್ವಹಿಸುತ್ತದೆ. 450 ಎಂಎಹೆಚ್ ಸಾಮರ್ಥ್ಯ ಹೊಂದಿದ ಬ್ಯಾಟರಿ ಚಾಲಿತ, ಅಗ್ನಿ ನಿರೋಧಕ ಉಪಕರಣ ಇದಾಗಿದ್ದು, 4 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ಈ ಯಂತ್ರದಲ್ಲಿ ಥರ್ಮಲ್ ಸ್ಕ್ಯಾನರ್ ಕ್ಯಾಮೆರಾ ಇದ್ದು ರಿಮೋಟ್ ಚಾಲಿತವಾಗಿದ್ದು, 150 ಮೀಟರ್‌ವರೆಗೆ ತೆರಳುವ ಸಾಮರ್ಥ್ಯ ಹೊಂದಿದೆ.
ಇದು ನಾಲ್ಕರಿಂದ ಐದು ಮೀಟರ್ ವಾಟರ್ ಸ್ಪ್ರೇ ಮಾಡುತ್ತದೆ. 190 ಡಿಗ್ರಿ ತಿರುಗುವ ಸಾಮರ್ಥ್ಯ ಹೊಂದಿದ್ದು, ನೀರನ್ನು 10 ಮೀಟರ್‌ವರೆಗೆ ಜಟ್ ಹಾಗೂ ಸ್ಪ್ರೇ ರೀತಿಯಲ್ಲಿ ಮೇಲಕ್ಕೆ ಚಿಮ್ಮಿಸುವ ಸಾಮರ್ಥ್ಯ ಇದಕ್ಕಿದೆ. ಲಿಕ್ವಿಡ್, ನೀರು ಬಳಸಿ ಫೋಮ್ ಮಾಡಿ ನೀರು ಸ್ಪ್ರೇ ಮಾಡುತ್ತದೆ. ಈ ಫೈರ್ ಬೋಟ್‌ನನ್ನು ಜನರಲ್, ಆಯಿಲ್, ಮೆಟಲ್ ಫೈರ್ ಆದಾಗ ಬಳಕೆ ಮಾಡಬಹುದಾಗಿದೆ. ಇದನ್ನೂ ಓದಿ: ವಿದೇಶದಲ್ಲಿ ಓದು ಮುಗಿಸಿ ಮನೆಗೆ ಬಂದಿದ್ದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಈ ಫೈರ್ ಬೋಟ್‌ನನ್ನು ಅಗ್ನಿ ದುರಂತ ಸಂಭವಿಸಿದಾಗ ಎಲ್ಲಿ ಮನುಷ್ಯ ತೆರಳಲು ಸಾಧ್ಯವಿಲ್ಲವೋ ಅಂತ ಪ್ರದೇಶಗಳಿಗೆ ಇದನ್ನು ಕಳುಹಿಸಬಹುದು. ಇದಲ್ಲದೇ ನೌಕೆ, ಅಣು ಸ್ಥಾವರ, ಶಸ್ತ್ರಾಗಾರದಲ್ಲಿ ಅಗ್ನಿ ದುರಂತ ನಡೆದಾಗ ಇದನ್ನು ಬಳಸಲಾಗುತ್ತದೆ. ಇದು ಚಿಕ್ಕ ಮೆಟ್ಟಲುಗಳನ್ನು ಸಹ ಹತ್ತಿ ಹೋಗುವ ಸಾಮರ್ಥ್ಯ ಹೊಂದಿದ್ದು, ಕಾರವಾರದಲ್ಲಿ ಈ ಫೈರ್ ಬೋಟ್ 8ಕ್ಕೂ ಹೆಚ್ಚು ಇದ್ದು, ಶೀಘ್ರದಲ್ಲಿ ಅಗ್ನಿಶಾಮಕ ದಳಕ್ಕೂ ಈ ಫೈರ್ ಬೋಟ್(ಫೈರ್ ರೋಬೋಟ್)ಬಳಕೆ ಮಾಡುವ ಸಾಧ್ಯತೆಗಳಿವೆ.