ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಕೆಂಪು ಕೋಟೆಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ಈ ವೇಳೆ ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾದ ಎರಡು ‘ಹೊವಿಟ್ಜರ್’ ಫಿರಂಗಿಗಳಿಂದ ’21 ಗನ್ ಸೆಲ್ಯೂಟ್’ ಮಾಡಲಾಯಿತು.
ಈ ಫಿರಂಗಿಯನ್ನು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ), ಶಸ್ತ್ರಾಸ್ತ್ರ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಎಆರ್‌ಡಿಇ) ನೇತೃತ್ವದ ವಿಜ್ಞಾನಿಗಳು ಹಾಗೂ ಫಿರಂಗಿ ಅಧಿಕಾರಿಗಳ ತಂಡ ತಯಾರಿಸಿದೆ.
Advertisement
Advertisement
ಕಳೆದ ವರ್ಷದವರೆಗೆ 21 ಗನ್ ಸೆಲ್ಯೂಟ್ ಅನ್ನು ಬ್ರಿಟಿಷ್ ನಿರ್ಮಿತ 7 ವಿಂಟೇಜ್ 25 ಪೌಂಡರ್ ಗನ್ ಬಳಸಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಸಲ ಭಾರತದಲ್ಲೇ ತಯಾರಾದ 2 ಹೋವಿಟ್ಜರ್ ಗನ್‌ಗಳನ್ನು ಬಳಸಲಾಗಿದೆ.
Advertisement
ಏನಿದರ ವಿಶೇಷತೆ?
ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್(ಎಟಿಎಜಿಎಸ್) ಎಂದೂ ಕರೆಯಲಾಗುವ ಫಿರಂಗಿ, ವಿಶ್ವದ ಲಾಗ್ ರೇಂಜ್ ಫಿರಂಗಿಗಳಲ್ಲಿ ಒಂದಾಗಿದೆ. ಲಾಂಗ್ ರೇಂಜ್ ಫಿರಂಗಿಗಳಿಗೆ ಸಾಮಾನ್ಯವಾಗಿ ಹೋವಿಟ್ಜರ್ ಎಂದೇ ಕರೆಯಲಾಗುತ್ತದೆ. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನವು ಯಶಸ್ಸನ್ನು ಪಡೆದಿದೆ: ರಾಜ್ಯಪಾಲ
Advertisement
#WATCH | Made in India ATAGS howitzer firing as part of the 21 gun salute on the #IndependenceDay this year, at the Red Fort in Delhi. #IndiaAt75
(Source: DRDO) pic.twitter.com/UmBMPPO6a7
— ANI (@ANI) August 15, 2022
ಈ ಬಗ್ಗೆ ವಿವರಿಸಿದ ಡಿಆರ್‌ಡಿಒ ಸಂಪನ್ಮೂಲ ಹಾಗೂ ನಿರ್ವಾಹಕ ಸಂಗಮ್ ಸಿನ್ಹಾ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಳಸಲಾಗಿರುವ ಫಿರಂಗಿ ಭಾರತಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಇದು ವಿಶ್ವದ ಅತಿ ಉದ್ದ ಶ್ರೇಣಿಯ ಫಿರಂಗಿಯಾಗಿದ್ದು, 45 ರಿಂದ 48 ಕಿ.ಮೀ ದೂರದ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.
ಮೊದಲ ಬಾರಿಗೆ ಇದನ್ನು ಭಾರತದಲ್ಲಿಯೇ ತಯಾರಿಸಲಾಗಿರುವುದು ದೊಡ್ಡ ವಿಚಾರ. ಸ್ವದೇಶೀ ಫಿರಂಗಿಯನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ 21 ಗನ್ ಸೆಲ್ಯೂಟ್‌ಗಾಗಿ ಬಳಸಲಾಗುತ್ತಿದೆ. ಇದನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದುಇದು ಭಾರತೀಯ ಸೇನೆಗೆ ದೊಡ್ಡ ಬಲ ನೀಡಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಅಜಾದಿ ಗೌರವ್ ಯಾತ್ರೆ