ಡೆಹ್ರಾಡೂನ್: ಕೇವಲ 500 ರೂ.ಗಳನ್ನು ನೀಡಿದರೆ ಒಂದು ರಾತ್ರಿ ಜೈಲಿನಲ್ಲಿ (Jail) ಕೈದಿಗಳಂತೆ ಇರಲು ಉತ್ತರಾಖಂಡದ (Uttarakhand) ಜೈಲು ಆಡಳಿತವು ವಿಶಿಷ್ಟ ರೀತಿಯ ಆಫರ್ ನೀಡಿದೆ.
ಕೆಲವರಿಗೆ ಜ್ಯೋತಿಷ್ಯ ಕೇಳುವ ರೂಢಿ ಇರುತ್ತೆ. ಕೆಲವೊಮ್ಮೆ ಜ್ಯೋತಿಷಿಗಳು ಬಂಧನದ ಭೀತಿ ಇದೆ ಎಂದು ಹೇಳುತ್ತಾರೆ. ಇದರಿಂದಾಗಿ ಪರಿಹಾರಕ್ಕಾಗಿ ಅನೇಕ ರೀತಿಯ ಖರ್ಚನ್ನು ಮಾಡುತ್ತಾರೆ. ಹೋಮ, ಹವನವನ್ನು ಮಾಡುತ್ತಾರೆ. ಆದರೆ ಉತ್ತರ ಖಂಡದ ಹಲ್ದ್ವಾನಿ ಆಡಳಿತವು ಈ ರೀತಿ ತೊಂದರೆ ಅನುಭವಿಸುವವರಿಗೆಂದೇ ಅಥವಾ ವಿಚಿತ್ರ ಆಸೆ ಹೊಂದಿದವರಿಗೆ ಅದನ್ನು ತೀರಿಸಲು ಅನುವು ಮಾಡಿಕೊಟ್ಟಿದೆ.
Advertisement
Advertisement
ಹಲ್ದ್ವಾನಿ ಜೈಲನ್ನು 1903ರಲ್ಲಿ ನಿರ್ಮಿಸಲಾಗಿದೆ. ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಜೈಲಿನಲ್ಲಿ ಉಳಿದುಕೊಳ್ಳಬಹುದು. ಕೈದಿಗಳು ಧರಿಸುವಂತಹ ಬಟ್ಟೆ ಹಾಗೂ ಕಾರಾಗೃಹದಲ್ಲಿ ನೀಡುವ ಊಟವನ್ನು ನೀಡಲಾಗುತ್ತದೆ. ಇದನ್ನೂ ಓದಿ: RSS ಭಯೋತ್ಪಾದಕ ಚಟುವಟಿಕೆ ಮಾಡಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ: ಎಂಟಿಬಿ ನಾಗರಾಜ್
Advertisement
ಪ್ರಸ್ತುತವಾಗಿ ಈ ಜೈಲಿನಲ್ಲಿ ಇದೀಗ ಕೈದಿಗಳಿಲ್ಲ. ಬದಲಿಗೆ ಅತಿಥಿಗಳು (Tourist) ತಂಗಲು ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಉಳಿದುಕೊಳ್ಳಲು ಬರುವವರಿಗೆ ಕಾರಾಗೃಹದ ಅನುಭವ ಆಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನೂ ಓದಿ: ರೆಸ್ಟೋರೆಂಟ್‍ನಲ್ಲಿ ಬೆಂಕಿ – 17 ಮಂದಿ ಸಜೀವ ದಹನ