ನವದೆಹಲಿ: ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ ಎನ್ನುವ ವಿಡಿಯೋವನ್ನು ಟ್ವೀಟ್ ಮಾಡಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಈಗ ಕ್ಷಮೆ ಕೇಳಿದ್ದಾರೆ.
ಸೋಮವಾರ ಹಿರಿಯ ನಟಿ ಅಜ್ಮಿ ಅವರು, ರೈಲ್ವೇ ಸಿಬ್ಬಂದಿ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿದ್ದ 30 ಸೆಕೆಂಡ್ ವಿಡಿಯೋ ಟ್ವೀಟ್ ಮಾಡಿದ್ದರು. ಅಲ್ಲದೇ ಇದನ್ನು ನೋಡಿ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದರು.
Advertisement
Mam, video is of Malaysian eatery which faces closure after video shows workers washing dishes in puddle of murky water: Link News is https://t.co/n6U2f9fMP0
— Ministry of Railways (@RailMinIndia) June 5, 2018
Advertisement
ಅಜ್ಮಿ ಅವರ ಟ್ವೀಟ್‍ನಿಂದ ತಬ್ಬಿಬ್ಬಾದ ರೈಲ್ವೇ ಸಚಿವಾಲಯ ವಿಡಿಯೋ ಎಲ್ಲಿದೆಂದು ಪತ್ತೆಹಚ್ಚಿ, ಬುಧವಾರ ಸಂಜೆ ತಮ್ಮ ಉತ್ತರವನ್ನು ಟ್ವೀಟ್ ಮಾಡಿದ್ದಾರೆ. “ಮೇಡಂ ನೀವು ಟ್ಯಾಗ್ ಮಾಡಿರುವ ಕೊಳಚೆ ನೀರಿನಲ್ಲಿ ಪಾತ್ರೆ ತೊಳೆಯುತ್ತಿವ ವಿಡಿಯೋ ಮಲೇಷ್ಯಾದ ಉಪಹಾರ ಗೃಹಕ್ಕೆ ಸೇರಿದ್ದು” ಎಂದು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದೆ.
Advertisement
ಸಚಿವಾಲಯ ಟ್ವೀಟ್ ನೋಡಿದ ಬಳಿಕ ಎಚ್ಚೆತ್ತ ಹಿರಿಯ ನಟಿ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಹಾಗೂ ಮಾಹಿತಿ ನೀಡಿದ್ದಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಶಬಾನಾ ಅಜ್ಮಿ ಅವರ ಟ್ವೀಟ್ ಗೆ ಟ್ವಿಟ್ಟರ್ ನಲ್ಲಿ ಜನ ತರಾಟೆಗೆ ತೆಗೆದುಕೊಂಡಿದ್ದು, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ರೈಲ್ವೇ ಸಚಿವಾಲಯವು ಅಜ್ಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಬೇಕೆಂದು ಆಗ್ರಹಿಸಿದ್ದಾರೆ.