-2ನೇ ಮದುವೆ ಬಗ್ಗೆ ಪ್ರಶ್ನಿಸಿದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟ
ಬೆಂಗಳೂರು: ಉಂಡು ಹೋದ ಕೊಂಡು ಹೋದ ಎನ್ನುವ ಹಾಗೆ ಕಾಲ್ ಸೆಂಟರ್ ವ್ಯಕ್ತಿಯೊಬ್ಬ ಯುಎಸ್ಎ ಅಲ್ಲಿದ್ದ ಟೆಕ್ಕಿಯೊಂದಿಗೆ ಲವ್ ಮಾಡಿ ಲಕ್ಷಗಟ್ಟಲೆ ಹಣ ಪಡೆದು ಮದುವೆ ಆಗಿದ್ದನು. ಆದರೆ ಈಗ ಪತಿ ಎರಡನೇ ಮದುವೆಯಾಗಿದನ್ನ ಪ್ರಶ್ನಿಸಿದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ಹೌದು. ಪಾಪಿ ಪತಿಯೊಬ್ಬ ತನ್ನ ಅನಾಚರವನ್ನು ಪ್ರಶ್ನಿಸಿದ ಪತ್ನಿ ಮೇಲೆ ತ್ರಿವಳಿ ತಲಾಖ್ ಹೆಸರಿನಲ್ಲಿ ದರ್ಪ ಮೆರೆದಿದ್ದಾನೆ. ಯುಎಸ್ಎ ಅಲ್ಲಿದ್ದ ಟೆಕ್ಕಿ ಜಕಿಯೋನ್ನಿಸ ಅವರಿಗೆ ಪತಿ ಸೈಯ್ಯದ್ ರಹೇಮಾನ್ ಮೋಸ ಮಾಡಿದ್ದಾನೆ. ಯುಎಸ್ಎಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಟಿಕ್ಕಿ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಸೈಯ್ಯದ್ನನ್ನು ಪ್ರೀತಿಸಿ ಮದುವೆಯಾಗಿದ್ದರು. ಅಲ್ಲದೆ ಈತನನ್ನು ಪತಿಯಾಗಿ ಪಡೆಯಲು ಬರೋಬ್ಬರಿ 30 ಲಕ್ಷ ರೂ. ಖರ್ಚು ಕೂಡ ಮಾಡಿದ್ದರು. ಪತ್ನಿ ದುಡಿಮೆಯಲ್ಲಿ ಮೂರು ತಿಂಗಳು ಮಜಾ ಮಾಡಿದ ಬಳಿಕ ಚಾಲಾಕಿ ಪತಿ ತನ್ನ ವರಸೆ ತೋರಿಸಿದ್ದಾನೆ.
Advertisement
Advertisement
ನಿತ್ಯ ಕುಡಿದು ಬಂದು ಸಾಫ್ಟ್ ವೇರ್ ಪತ್ನಿಗೆ ಕಿರುಕುಳ ನೀಡಿದ್ದಾನೆ. ಪತಿಯನ್ನು ಯುಎಸ್ಗೆ ಕರೆದೊಯ್ಯಲು ಪತ್ನಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಯುಎಸ್ಎನಲ್ಲಿ ಇದ್ದಷ್ಟು ದಿನ ನಿರಂತರವಾಗಿ ಪತ್ನಿಗೆ ಟಾರ್ಚರ್ ನೀಡುತ್ತಿದ್ದನು. ಆದರೆ ಇತ್ತೀಚಿಗೆ ಬೆಂಗಳೂರಿಗೆ ಪತ್ನಿಯನ್ನ ಕರೆತಂದು ಆಕೆಯ ತಂದೆ ತಾಯಿ ಮನೆಯಲ್ಲಿ ಸೈಯದ್ ಬಿಟ್ಟಿದ್ದನು. ಅಷ್ಟೇ ಅಲ್ಲದೆ ಪತ್ನಿ ಎದುರಲ್ಲೇ ಬೇರೋಬಳ್ಳೊಂದಿಗೆ ಸೈಯ್ಯದ್ ಚಾಟಿಂಗ್, ಎಂಎಂಎಸ್ ಮಾಡಿದ್ದನು. ಈ ಅನಾಚರವನ್ನ ಪ್ರಶ್ನೆ ಮಾಡಿದರೆ ಪತ್ನಿ ಮೇಲೆಯೇ ಮಾರಾಣಾಂತಿಕವಾಗಿ ಹಲ್ಲೆ ಪತಿ ಹಲ್ಲೆ ಮಾಡುತ್ತಿದ್ದ ಎಂದು ನೊಂದ ಪತ್ನಿ ಆರೋಪಿಸಿದ್ದಾರೆ.
Advertisement
Advertisement
ಪತ್ನಿ ತವರು ಮನೆಯಲ್ಲಿದ್ದಾಗ ಆಕೆಯ ಕಣ್ತಪ್ಪಿಸಿ ತನ್ನ ಹೆಸರು ಬದಲಿಸಿಕೊಂಡು ಬೇರೊಬ್ಬಳ ಜೊತೆ ಸೈಯದ್ ಮದುವೆ ಆಗಿದ್ದಾನೆ. ಆದರೆ ಈ ವಿಚಾರ ಮೊದಲನೇ ಪತ್ನಿಗೆ ಗೊತ್ತಾಗಿದೆ. ಈ ವಿಚಾರ ಹೊರಬೀಳುತ್ತಿದ್ದಂತೆ ತ್ರಿವಳಿ ತಲಾಖ್ ಚಾಲ್ತಿಯಲ್ಲಿಲ್ಲದ್ದಿದ್ದರು ತಲಾಖ್ ಎಂದು ಹೇಳಿ ಸೈಯದ್ ಕೈ ತೊಳೆದುಕೊಂಡಿದ್ದಾನೆ. ಕಾಲ್ ಸೆಂಟರ್ ಪತಿ ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಗೆ ಟೆಕ್ಕಿ ದೂರು ನೀಡಿದ್ದಾರೆ.
ಆದರೆ ಪತಿಯ ವಿರುದ್ಧ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೆಕ್ಕಿ ಆರೋಪಿಸಿದ್ದಾರೆ. ಅಲ್ಲದೆ ಪತಿಯ ನವರಂಗಿ ಆಟದಿಂದ ಬೀದಿಗೆ ಬಿದ್ದಿರುವ ಟೆಕ್ಕಿ, ನ್ಯಾಯಾಕ್ಕಾಗಿ ಪೊಲೀಸ್ ಠಾಣೆ, ಪೊಲೀಸ್ ಆಯುಕ್ತರ ಕಚೇರಿಗೆ ಅಲಿಯುತ್ತಿದ್ದಾರೆ.