ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ನನ್ನ ಸಂಬಂಧಕ್ಕೆ ಭಂಗವಿಲ್ಲ. ಸಂಘ ಪರಿವಾರದವರು ಸಂಪರ್ಕ ಮಾಡಿದ್ದಾರೆ. ಅವರಿಗೆ ಸಮಾಧಾನವೂ ಇಲ್ಲ, ವಿರೋಧವೂ ಇಲ್ಲ ಎಂದಿದ್ದಾರೆ. ಹಿಂದೂಗಳಲ್ಲೂ ಕೆಲವರು ಗೋಮಾಂಸ ಭಕ್ಷಣೆ ಮಾಡ್ತಾರೆ. ಈ ಬಗ್ಗೆ ಅರಿವಿದ್ದೇ ಹೇಳಿದ್ದೇನೆ. ಯಾರು ಮಾಡ್ತಾರೆ ಅಂತ ಹೇಳಲಾರೆ ಮತ್ತು ಮುತಾಲಿಕ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡೋದಿಲ್ಲ ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್
ರಾಮ ಮಂದಿರ ವಿಚಾರದಲ್ಲಿ ನಡೆದ ಸಂಧಾನದಲ್ಲಿ ಮಂದಿರದೊಳಗೆ ವಾರಕ್ಕೊಮ್ಮೆ ನಮಾಜಿಗೆ ಅವಕಾಶ ನೀಡಲು ತೀರ್ಮಾನವಾಗಿತ್ತು. ಮಂದಿರದೊಳಗೆ ನಮಾಜು ಮಾಡಬಹುದು ಅಂತಾದ್ರೆ, ಕೃಷ್ಣಮಠದ ಹೊರ ಆವರಣದಲ್ಲಿ ನಮಾಜಿಗೆ ಅವಕಾಶ ಕೊಟ್ಟದ್ದು ತಪ್ಪಾಗುತ್ತಾ? ಎಂದು ಪೇಜಾವರ ಸ್ವಾಮಿಗಳು ಪ್ರಶ್ನಿಸಿದ್ದಾರೆ.
ಇದನ್ನೂ ಒದಿ: ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ ಉಡುಪಿ ಕೃಷ್ಣಮಠ- ಅನ್ನಬ್ರಹ್ಮ ಛತ್ರದಲ್ಲಿ ನಮಾಜ್
ದಶಕಗಳ ಹಿಂದೆ ಎರಡು ಧರ್ಮೀಯರ ನಡುವೆ ಈ ಸಂಧಾನ ನಡೆದಿತ್ತು. ಆಗ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ರು, ನನಗೂ ಆಹ್ವಾನವಿತ್ತು. ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಒಪ್ಪಿದ್ರು, ಆದರೆ ವಾರದಲ್ಲಿ ಒಂದು ದಿನ ಮಂದಿರದೊಳಗೆ ನಮಾಜಿಗೆ ಅವಕಾಶ ಕೋರಿದ್ರು, ಮುಸ್ಲಿಂರ ಪ್ರಾರ್ಥನೆ ಮಾಡಿದ್ರೆ ಹಿಂದೂ ನಿಂದನೆಯಾಗುತ್ತಾ ಎಂದು ಪೇಜಾವರ್ ಶ್ರೀಗಳು ಹೇಳಿದ್ದಾರೆ.
https://www.youtube.com/watch?v=-E0LxTH_kIM