ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಮರೆತು, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಹೊಸ ಸಿನಿಮಾದ ಕೆಲಸವನ್ನೂ ಅವರು ಶುರು ಮಾಡಿದ್ದಾರೆ. ಆದರೆ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗೆಗಿನ ಕೆಲವರ ಅಸಮಾಧಾನ ಮಾತ್ರ ಇನ್ನೂ ನಿಂತಿಲ್ಲ. ಗೋವಾದಲ್ಲಿ ನಡೆದ ಚಿತ್ರೋತ್ಸವದಲ್ಲಿ ಜ್ಯೂರಿಯಾಗಿದ್ದ ನಡಾವ್ ಕಟು ಟೀಕೆ ಮಾಡಿದ್ದರು. ಅದು ಸಾಕಷ್ಟು ಚರ್ಚೆಯನ್ನೂ ಹುಟ್ಟುಹಾಕಿತ್ತು. ಇದೀಗ ಬಾಲಿವುಡ್ ನಿರ್ದೇಶಕರೊಬ್ಬರು ಈ ಸಿನಿಮಾದ ಬಗ್ಗೆ ಮತ್ತೊಂದು ಟೀಕೆ ಮಾಡಿದ್ದಾರೆ.
Advertisement
ಬಾಲಿವುಡ್ ನಲ್ಲಿ ಅನೇಕ ಕಲಾತ್ಮಕ ಸಿನಿಮಾಗಳನ್ನು ಮಾಡಿರುವ, ಮತ್ತು ಪ್ಯಾರಲಲ್ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿರುವ ನಿರ್ದೇಶಕ ಸಯಿದ್ ಅಖ್ತರ್ ಈ ಸಿನಿಮಾದ ಕುರಿತು ಕಾಮೆಂಟ್ ಮಾಡಿದ್ದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಒಂದು ಕಸ ಎಂದು ಹೇಳಿಕೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಈ ಸಿನಿಮಾ ನನ್ನ ಪಾಲಿಗೆ ಕಸದ ರೀತಿ ಎಂದು ಹೇಳಿದ್ದಾರೆ. ಈ ಮಾತು ಕೂಡ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ
Advertisement
Advertisement
ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರ ಮೇಲೆ ಹಲ್ಲೆ ಆಗಿದ್ದು, ಮಾರಣಹೋಮ ನಡೆದಿದ್ದು ಎಲ್ಲವೂ ನಿಜ. ಅದನ್ನು ನಾನು ಸುಳ್ಳು ಅಂತ ಹೇಳಲಾರೆ. ಪಂಡಿತರ ರೀತಿಯಲ್ಲೇ ಮುಸ್ಲಿಂ ಜನರದ್ದು ಹತ್ಯೆಯಾಗಿದೆ. ಅವರೂ ಕಿರುಕುಳವನ್ನೂ ಅನುಭವಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅದನ್ನು ತೋರಿಸಿಲ್ಲ. ಸತ್ಯವನ್ನು ಮುಚ್ಚಿಟ್ಟು ತಮಗೆ ತೋಚಿದಂತೆ ಸಿನಿಮಾ ಮಾಡಿದ್ದಾರೆ. ಹಾಗಾಗಿ ಅದು ಕಸ ಎಂದು ನನಗೆ ಅನಿಸಿದೆ ಎಂದು ಅಖ್ತರ್ ಹೇಳಿದ್ದಾರೆ.