ಮಂಡ್ಯ: ಆರ್ಕೇಸ್ಟ್ರಾದಲ್ಲಿ ಫ್ಲೆಕ್ಸ್ ಹಾಕಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಜಗಳದಲ್ಲಿ ಯುವಕನನ್ನು ಆತನ ಸ್ನೇಹಿತರೇ ಹೊಡೆದು ಕೊಲೆ ಮಾಡಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.
ಮೃತ ಯುವಕನನ್ನು ಅರುಣ್(22) ಎಂದು ಗುರುತಿಸಲಾಗಿದ್ದು, ಈತ ತನ್ನ 18ನೇ ವಯಸ್ಸಿನಲ್ಲೇ ಪೊಲೀಸ್‍ರ ರೌಡಿಶೀಟರ್‌ನ ಲಸ್ಟ್‌ನಲ್ಲಿ ಸೇರಿಕೊಂಡಿದ್ದ. ಆಗಾಗ ಊರಿನಲ್ಲಿ ನಡೆಯುತ್ತಿದ್ದ ಸಣ್ಣ-ಪುಟ್ಟ ಗಲಾಟೆಯಲ್ಲಿ ಭಾಗಿಯಾಗುತ್ತಿದ್ದ. ಇದೀಗ ಜೊತೆಯಲ್ಲಿ ಇದ್ದವರೇ ಆತನನ್ನು ಹೊಡೆದು ಕೊಲೆ ಗೈದಿದ್ದಾರೆ. ಇದನ್ನೂ ಓದಿ: ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಮಾರಾಟ – ಆಪ್ ವಿರುದ್ಧ ಬಿಜೆಪಿ ಗಂಭೀರ ಆರೋಪ
Advertisement
Advertisement
ಅರುಣ್ ಕೊಲೆಗೆ ಇದೇ ತಿಂಗಳ 19 ರಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆದ ಆರ್ಕೇಸ್ಟ್ರಾವೇ ಕಾರಣ. ಅರುಣ್ ಹಾಗೂ ಆತನ ಸ್ನೇಹಿತರು ಈ ಹಿಂದೆ ಶಾಸಕ ಡಿಸಿ ತಮ್ಮಣ್ಣ ಅವರ ಬೆಂಬಲಿಗರಾಗಿದ್ದರು. ಆದರೆ ಕನ್ನಡ ರಾಜ್ಯೋತ್ಸವದ ಆರ್ಕೇಸ್ಟ್ರಾದಲ್ಲಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಸಮಾಜ ಸೇವಕ ಕದಲೂರು ಉದಯ್ ಅವರ ಫ್ಲೆಕ್ಸ್ ಮಾತ್ರ ಹಾಕಿದ್ದಾರೆ. ಈ ಬಗ್ಗೆ ಅರುಣ್ ಸ್ನೇಹಿತರೊಂದಿಗೆ ಇಷ್ಟು ದಿನ ನೀವು ತಮ್ಮಣ್ಣ ಜೊತೆಗೆ ಇದ್ದು ಈಗ ಉದಯ್ ಫೋಟೋ ಹಾಕಿಸಿದ್ದೀರಾ ಎಂದು ಮಾತನಾಡಿದ್ದಾನೆ. ಇದೇ ಜಗಳ ನಡೆದು ಅರುಣ್‍ನನ್ನು ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ, ಗಜ, ಬೆಳ್ಳಾ ರಾಘುಳಿ ಸೇರಿದಂತೆ 8 ಮಂದಿ ನನ್ನ ಮಗನನ್ನು ಹೊಡೆದು ಕೊಲೆ ಮಾಡಿದ್ದಾರೆ ಎಂದು ಅರಣ್ ತಂದೆ ರಮೇಶ್ ಆರೋಪಿಸಿದ್ದಾರೆ.
Advertisement
Advertisement
ಭಾನುವಾರ ಸಂಜೆ ಅರುಣ್ ಮೇಲೆ ದೊಡ್ಡರಸಿನಕೆರೆ ಗ್ರಾಮದ ಸರ್ಕಲ್‍ನಲ್ಲಿ ನಾಲ್ವರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಗ್ರಾಮಸ್ಥರು ಗಲಾಟೆ ಬಿಡಿಸಿ ಕಳುಹಿಸಿದ್ದಾರೆ. ನಂತರ ಅರುಣ್‍ನನ್ನು ಕೆ.ಎಂ.ದೊಡ್ಡಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದೇವರಹಳ್ಳಿ ಬಳಿಕ ಮತ್ತೆ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ದೊಣ್ಣೆ, ಕಲ್ಲಿನಿಂದ ಹಲ್ಲೆ ಮಾಡಿರುವ ಕಾರಣ ಅರುಣ್ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ನಂತರ ಅರುಣ್‍ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅರುಣ್ ಸಾವನ್ನಪ್ಪಿದ್ದಾನೆ. ಸದ್ಯ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಎಂ ದೊಡ್ಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನೂ ಅರುಣ್ ಮೇಲೆ ಹಲ್ಲೆ ಮಾಡಿದವರ ಮನೆ ಮೇಲೆ ಅರುಣ್ ಸ್ನೇಹಿತರು ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಪುಡಿಗೊಳಿಸಿದ್ದಾರೆ.
ಒಟ್ಟಾರೆ ಮೀಸೆ ಚಿಗುರೋ ವಯಸ್ಸಿನಲ್ಲಿ ರೌಡಿಶೀಟರ್ ಆಗಿದ್ದವ, ಇದೀಗ ಆರ್ಕೇಸ್ಟ್ರಾದ ಫ್ಲೆಕ್ಸ್ ವಿಚಾರಕ್ಕೆ ಬಾಳಿ ಬದುಕಬೇಕಾದವ ಹೆಣವಾಗಿ ಮಲಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಕುಕ್ಕರ್ ಬಾಂಬ್ ಬ್ಲಾಸ್ಟ್- ಜಾಗತಿಕ ಉಗ್ರ ಸಂಘಟನೆಯಿಂದ ಪ್ರಭಾವಿತನಾಗಿದ್ದ ಶಾರೀಕ್: ADGP