ನ್ಯೂಯಾರ್ಕ್: ಇದೇ ಮೊದಲ ಬಾರಿಗೆ ಭಾರತ ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಮತದಾನ ಮಾಡಿದೆ.
ಉಕ್ರೇನ್‌ನ 31ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಉಕ್ರೇನ್-ರಷ್ಯಾ ಯುದ್ಧಕ್ಕೆ 6 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆ ಆಯೋಜಿಸಿತ್ತು.
Advertisement
ಒಟ್ಟು 15 ಸದಸ್ಯ ದೇಶಗಳ ಪೈಕಿ ಚೀನಾ ಮತದಾನಕ್ಕೆ ಗೈರಾದರೆ, ರಷ್ಯಾ ವಿಟೋ ಚಲಾಯಿಸಿತು. ಭಾರತ ಸೇರಿ 13 ದೇಶಗಳು ಉಕ್ರೇನ್ ಪರ ಮತ ಚಲಾಯಿಸಿದವು. ಇದನ್ನೂ ಓದಿ: ನಮಗೆ ನಿಮ್ಮ ಸಲಹೆ ಬೇಡ: ನೆದರ್ಲೆಂಡ್‌ಗೆ ತಿರುಗೇಟು ನೀಡಿದ ಭಾರತ
Advertisement
Advertisement
ಸಭೆ ಪ್ರಾರಂಭವಾಗುತ್ತಿದ್ದಂತೆ, ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ಎ ನೆಬೆಂಜಿಯಾ ಅವರು ವೀಡಿಯೊ ಟೆಲಿ-ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಉಕ್ರೇನಿಯನ್ ಅಧ್ಯಕ್ಷರ ಭಾಗವಹಿಸುವಿಕೆಯ ಬಗ್ಗೆ ಕಾರ್ಯವಿಧಾನದ ಮತವನ್ನು ಕೇಳಿದರು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲು ಭಾರತ ಬೆಂಬಲ ಸೂಚಿಸಿತು.
Advertisement
ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಸಾಮಾನ್ಯ ಸಭೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿದಿತ್ತು. ಮಾತುಕತೆ ಮೂಲಕ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿತ್ತು. ಇದನ್ನೂ ಓದಿ: ಕೊರೊನಾ ಲಸಿಕೆಯಂತೆ ಗೋಧಿ ರಫ್ತು ಮಾಡಲಾಗುದಿಲ್ಲ: ಭಾರತ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ, ಇಂಗ್ಲೆಂಡ್, ರಷ್ಯಾ, ಚೀನಾ, ಫ್ರಾನ್ಸ್ ಖಾಯಂ ದೇಶಗಳಾಗಿದ್ದರೆ 10 ರಾಷ್ಟ್ರಗಳು 2 ವರ್ಷಗಳ ಕಾಲ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುತ್ತದೆ. ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಈ ವರ್ಷದ ಡಿಸೆಂಬರ್‌ನಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.