ಮೈಸೂರು: ಹಣಕಾಸಿನ ವಿಚಾರಕ್ಕಾಗಿ ಜೀಪಿನಿಂದ ಡಿಕ್ಕಿ ಹೊಡಿಸಿ ಹೆತ್ತ ತಾಯಿಯನ್ನೆ ಮಗನೊಬ್ಬ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ನಾಗಮ್ಮ (65) ಮೃತ ದುರ್ದೈವಿ ಹಾಗೂ ಹೇಮರಾಜ್ (45) ಕೊಲೆ ಮಾಡಿದ ಆರೋಪಿ. ಹಣಕಾಸಿನ ವಿಚಾರಕ್ಕಾಗಿ ತಾಯಿ, ಮಗನ ನಡುವೆ ಪ್ರತಿನಿತ್ಯ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಹೆತ್ತ ತಾಯಿಯನ್ನೆ ಮಗ ಜೀಪಿನಿಂದ ಡಿಕ್ಕಿ ಹೊಡಿಸಿ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ.
Advertisement
Advertisement
ನಾಗಮ್ಮ ರಸ್ತೆ ಬದಿಯಲ್ಲಿ ಸಾಗುತ್ತಿದ್ದರು. ಆ ವೇಳೆ ಹೇಮರಾಜ್ ಅವರು ಜೀಪಿನಿಂದ ಡಿಕ್ಕಿ ಹೊಡಿಸಿ ಹತ್ಯೆ ಮಾಡಿದ್ದಾನೆ. ಪ್ರತಿನಿತ್ಯ ಹಣಕಾಸಿನ ವಿಚಾರಕ್ಕಾಗಿ ತಾಯಿ, ಮಗನ ನಡುವೆ ಆಗಾಗ ಗಲಾಟೆ ಆಗುತ್ತಿದ್ದ ಬಗ್ಗೆ ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ ಆರೋಪಿ ಹೇಮರಾಜ್‍ನನ್ನು ವಶಕ್ಕೆ ಪಡೆದಿದ್ದಾರೆ. ಬೆಟ್ಟದಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಾಲು ಕೊಡಲು ತಡ ಮಾಡಿದ್ದಕ್ಕೆ ಪತ್ನಿಗೆ ತಲಾಖ್