ಮೈಸೂರು: ಚನ್ನಪಟ್ಟಣ ಚುನಾವಣೆಗೆ (Channapattana Election) ನನ್ನ ಕುಟುಂಬದವರಲ್ಲ, ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಾವು ವೇದಿಕೆಯನ್ನು ಸೆಟ್ ಮಾಡಿಕೊಳ್ಳುತ್ತಿದ್ದೇವೆ. ಎಂಪಿ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಹಿನ್ನಡೆ ಆಗಿತ್ತು. ಎಂಎಲ್‌ಎ ಚುನಾವಣೆಯಲ್ಲಿಯೂ ಹೆಚ್ಚು ಹಿನ್ನಡೆಯಾಗಿತ್ತು. ಈಗ ನಮ್ಮ ಬೇಸ್ ಸ್ಟ್ರಾಂಗ್ ಮಾಡ್ತಾ ಇದ್ದೀವಿ. ನಮ್ಮ ಕೆಲಸಕ್ಕೆ ಜನರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ಇದೆ ಎಂದರು.ಇದನ್ನೂ ಓದಿ: ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ – ಸಿದ್ದಿಕಿಗೆ ಹತ್ಯೆಗೆ ಸರ್ಕಾರವೇ ಹೊಣೆ: ರಾಗಾ ಸಿಡಿಮಿಡಿ
Advertisement
Advertisement
ನಿಖಿಲ್ (Nikhil Kumaraswamy) ಚುನಾವಣೆ ಸ್ಪರ್ಧೆಗೆ ಒತ್ತಾಯದ ವಿಚಾರವಾಗಿ ಮಾತನಾಡಿ, ಅವರ ಪಕ್ಷದಲ್ಲಿ ಯಾರೂ ಬೇಕಾದರೂ ನಿಲ್ಲಲಿ. ಅದು ಅವರ ಪಕ್ಷಕ್ಕೆ ಬಿಟ್ಟಿದ್ದು, ಅದರ ಬಗ್ಗೆ ನಾನು ಮಾತಾಡಲ್ಲ. ಚನ್ನಪಟ್ಟಣದಲ್ಲಿ ವ್ಯಕ್ತಿ ಮೇಲೆ ಚುನಾವಣೆ ನಡೆಯಲ್ಲ. ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ಮಾಡಲು ಹೊರಟಿದ್ದೇನೆ. ಅವರು ಅಭ್ಯರ್ಥಿಯನ್ನು ಜೆಡಿಎಸ್ ಆದರೂ ಮಾಡಿಕೊಳ್ಳಲಿ, ಬಿಜೆಪಿ ಆದರೂ ಮಾಡಿಕೊಳ್ಳಲಿ. ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡರೆ ಸಾಕು ಎಂದು ಹೇಳಿದರು.
Advertisement
ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆಗೆ ಬಿಜೆಪಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಅದಕ್ಕೆ ಕಾಯುತ್ತಾರೆ. ಇನ್ನು 10 ವರ್ಷ ಅವರೇ ಇರುತ್ತಾರೆ. ಬಿಜೆಪಿಯವರು 10 ವರ್ಷ ಅದೇ ಕೂಗು ಕೂಗುತ್ತಾರೆ. ಅದೇ ಮಾತನಾಡುತ್ತಾರೆ. 10 ವರ್ಷ ಯಾರೂ ಸಿಎಂ ಆಗಿರುತ್ತಾರೆ ಎಂಬ ಬಿಜೆಪಿಯವರ ಪ್ರಶ್ನೆಗೆ ಖಡಕ್ಕಾಗಿ ಉತ್ತರಿಸಿದ್ದಾರೆ.
Advertisement
ಬಾಬಾ ಸಿದ್ದಿಕಿ ಗುಂಡೇಟು ವಿಚಾರವಾಗಿ ಮಾತನಾಡಿ, ಸಿದ್ದಿಕಿ ಬಾಬಾ (Baba Siddique) ನನಗೂ ಆತ್ಮೀಯರು. ನಮ್ಮ ಪಕ್ಷದಲ್ಲಿ ಇದ್ದವರು, ಮಂತ್ರಿ ಸಹ ಆಗಿದ್ದರು. ಈ ಘಟನೆಯಿಂದ ಮುಂಬೈನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಗೊತ್ತಾಗುತ್ತದೆ. ಮುಂದೆ ಚುನಾವಣೆ ಟೈಂ ಸಹ ಇದೆ ಆದ್ದರಿಂದ ಶಾಂತಿ ಕಾಪಾಡಬೇಕಾಗಿದೆ. ಈ ಘಟನೆ ಖಂಡನೀಯ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ಇದನ್ನೂ ಓದಿ: ಮಾಜಿ ಸಚಿವ ಸಿದ್ದಿಕಿ ಹತ್ಯೆ – ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಶಿಲ್ಪಾಶೆಟ್ಟಿ, ಆಸ್ಪತ್ರೆಗೆ ಬಾಲಿವುಡ್ ತಾರಾ ದಂಡೇ ದೌಡು