BJPಗೆ ದೇಶದ ಅಭಿವೃದ್ಧಿಗಿಂತ ಬೇರೆ ಪಕ್ಷ ಮುಗಿಸೋದೇ ಮುಖ್ಯ – ರಾಹುಲ್ ಪರ ಖರ್ಗೆ ಬ್ಯಾಟಿಂಗ್

Public TV
2 Min Read
Mallikarjuna Kharge

ಕಲಬುರಗಿ: ಬಿಜೆಪಿಯವರಿಗೆ (BJP) ಅಭಿವೃದ್ಧಿ ಮುಖ್ಯವಲ್ಲ, ಬೇರೆ ಪಕ್ಷ ದುರ್ಬಲಗೊಳಿಸುವುದು, ಮುಗಿಸುವುದೇ ಮುಖ್ಯವಾಗಿದೆ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಕಾಂಗ್ರೆಸ್ (Congress) ಮುಗಿಸಬೇಕು ಅಂತಾ 8 ಜನರನ್ನ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಮುಗಿಸಬೇಕು ಅನ್ನೋ ದೃಷ್ಟಿಯಿಂದ ಹೀಗೆ ಮಾಡ್ತಿದ್ದಾರೆ. ಕೇಂದ್ರದ (Central Government) ನಡೆಯಿಂದ ಜನ ಬೇಸತ್ತಿದ್ದಾರೆ. ಡಾಲರ್ (US Dollar) ಎದರು ರೂಪಾಯಿ ದಿನದಿನಕ್ಕೆ ಮೌಲ್ಯ ಕಳೆದಿಕೊಳ್ಳುತ್ತಿದೆ. ಜಿಡಿಪಿ (GDP) ಕೂಡಾ ಇಳಿಯುವ ಬಗ್ಗೆ ಆರ್ಥಿಕ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದರೂ ದೇಶದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಬೇರೆ ಪಕ್ಷ ದುರ್ಬಲಗೊಳಿಸಲು ಮುಂದಾಗಿದೆ. ನನ್ನ 51 ವರ್ಷದ ರಾಜಕಾರಣದಲ್ಲಿ ಎಲ್ಲವನ್ನೂ ನೋಡಿದ್ದೇನೆ. ಒಬ್ಬರನ್ನೊಬ್ಬರು ಮುಗಿಸುವಂತಹದ್ದು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Congress BJP

NIA ದಾಳಿ ಉದ್ದೇಶ ಗೊತ್ತಾಗ್ತಿಲ್ಲ:
ಯಾವ ಉದ್ದೇಶಕ್ಕಾಗಿ ಎನ್‌ಐಎ (NIA) ದಾಳಿ ಮಾಡ್ತಾರೆ ಅಂತಾ ನಮಗೇನು ಹೇಳಿಲ್ಲ. ಒಟ್ಟಿನಲ್ಲಿ ಯಾರೇ ದೇಶದ್ರೋಹಿ ಕೆಲಸ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ ಯಾವುದೇ ಸಂಸ್ಥೆಯ ಮೇಲೆ ಕ್ರಮ ತೆಗೆದುಕೊಳ್ಳುವಾಗ ಸಾಧಕ, ಬಾಧಕ ನೋಡಬೇಕು. ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ದಾಳಿಗಳು ನಡೆಯುತ್ತಿವೆ. ಸದ್ಯ ದೇಶದಲ್ಲಿ ಸರಿಯಾದ ವಾತಾವರಣ ಇಲ್ಲ ಎಂದು ಹೇಳಿದ್ದಾರೆ.

NIA 5 1

ನಾವು ದೇಶದ್ರೋಹಿ ಕೆಲಸ ಮಾಡೊರಿಗೆ ರಕ್ಷಣೆ ಕೊಡೋರಲ್ಲ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಕೊಡಿ. ಆದ್ರೆ ಅನವಶ್ಯಕವಾಗಿ ಯಾರಿಗೂ ತೊಂದರೆ ಕೊಡಬೇಡಿ, ದೇಶದಲ್ಲಿ ಅಶಾಂತಿ ಉಂಟು ಮಾಡೋ ಬಗ್ಗೆ ನಾವು ಸಹ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ.

RAHUL GANDHI PRESSMEET

ರಾಹುಲ್ ಗಾಂಧಿ (Rahul Gandhi) ಅಧ್ಯಕ್ಷರಾದರೆ ಲಾಭ:
ಎಐಸಿಸಿ (AICC) ಅಧ್ಯಕ್ಷ ಸ್ಥಾನಕ್ಕೆ ಯಾರ್ಯಾರು ಆಕಾಂಕ್ಷಿ ಇದ್ದಾರೆ ಅವರು ನಾಮಿನೇಷನ್ ಹಾಕ್ತಾರೆ. ನಾನಂತೂ ಆಕಾಂಕ್ಷಿ ಅಲ್ಲ. ಆದ್ರೆ ಪಕ್ಷ ಕೊಡುವ ಕೆಲಸ ನಾನು ಮಾಡಬೇಕಾಗುತ್ತದೆ. ರಾಹುಲ್ ಗಾಂಧಿ (Rahul Gandhi) ಅವರೇ ಅಧ್ಯಕ್ಷ ಆಗಬೇಕು ಅನ್ನೋದು ನನ್ನ ಅನಿಸಿಕೆ. ರಾಹುಲ್ ಗಾಂಧಿ ಅಧ್ಯಕ್ಷರಾದ್ರೆ ಪಕ್ಷಕ್ಕೆ ಲಾಭ ಆಗುತ್ತೆ. ರಾಹುಲ್ ಯುವಕರಿದ್ದಾರೆ ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟಿಸಬಹುದು ಅವರ ಬಳಿ ಹೋರಾಟದ ಸಾಮರ್ಥ್ಯವಿದೆ. ಯುವ ಶಕ್ತಿ ಅವರೊಂದಿಗೆ ಇದೆ ಹೀಗಾಗಿ ರಾಹುಲ್ ಗಾಂಧಿ ಮನವೊಲಿಸುವ ಕೆಲಸ ಮಾಡುತ್ತೇವೆ. ಏನಾಗುತ್ತದೆ ಎಂಬುದನ್ನು ಮುಂದೆ ಕಾದು ನೋಡಬೇಕಿದೆ ಎಂದು ಖರ್ಗೆ ತಿಳಿಸಿದ್ದಾರೆ.

narendra modi cheetah 2

ಬಿಜೆಪಿಗೆ ಅಭಿವೃದ್ಧಿ ಲಕ್ಷ್ಯವಿಲ್ಲ:
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ (Basavaraj Bommai) 5 ಸಾವಿರ ಕೋಟಿ ಕೊಡುವ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ಸಿಎಂ 5 ಸಾವಿರ ಕೋಟಿ ಕೊಡುತ್ತೇನೆ ಅಂತಾ ಹೇಳಿದ್ದಾರೆ. ಅದಕ್ಕೆ ನಾವು ಸ್ವಾಗತ ಮಾಡುತ್ತೇವೆ. ಹೇಳಿಕೆ ಕೊಟ್ಟು ಕಡಿಮೆ ಹಣ ಬಿಡುಗಡೆ ಮಾಡದೇ ಹೇಳಿದಷ್ಟು ಹಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಜನ ಸಾಯುವಾಗ ಚೀತಾ ಅಗತ್ಯವಿತ್ತಾ?
ಕೋವಿಡ್‌ನಿಂದ (Covid) ದೇಶದಲ್ಲಿ ಜನ ಸಾವನಪ್ಪಿದ್ದಾರೆ. ಅದೇಷ್ಟೋ ಜನ ಹಸಿವಿನಿಂದ ಈಗಲೂ ಸಾಯುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸೋ ಬದಲು ಚೀತಾ ತಂದಿದ್ದಾರೆ. ಚೀತಾ (Cheetah) ತಂದ್ರು ಏನು ಪ್ರಯೋಜನ ಇಲ್ಲ, ತರದೆ ಇದ್ರು ಏನು ಲಾಸ್ ಆಗ್ತಿರಲಿಲ್ಲ ಎಂದು ಪ್ರಧಾನಿ ಮೋದಿ (Narendra Modi) ನಡೆಗೆ ಖರ್ಗೆ ಟೀಕೆ ವ್ಯಕ್ತ ಪಡಿಸಿದ್ದಾರೆ.’

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *