ನವದೆಹಲಿ: ಹಳಿಯಲ್ಲಿ ಸೆಲ್ಫೀ ತೆಗೆದುಕೊಳ್ಳಲು ಹೋಗಿ ರೈಲು ಡಿಕ್ಕಿ ಹೊಡೆದು 18 ವರ್ಷದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನವದೆಹಲಿಯ ವೆಲ್‍ಕಮ್ ರೈಲ್ವೇ ಸ್ಟೇಷನ್ ಹತ್ತಿರ ನಡೆದಿದೆ.
ಅರ್ಬಾಜ್ ಖಾನ್(18) ಸಾವನ್ನಪ್ಪಿದ ಯುವಕ. ಸೀಲಮ್‍ಪುರ್ ನಿವಾಸಿಯಾದ ಅರ್ಬಾಜ್ ಘಟನೆ ನಡೆಯುವಾಗ ರೈಲ್ವೇ ಟ್ರ್ಯಾಕ್ ದಾಟುತ್ತಿದ್ದ. ರೈಲ್ವೇ ಟ್ರ್ಯಾಕ್ ದಾಟುವಾಗ ಮೊಬೈಲ್‍ನಲ್ಲಿ ಹಾಡನ್ನು ಕೇಳುತ್ತಿದ್ದನೋ, ಇಲ್ಲವೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement
ಇದನ್ನೂ ಓದಿ: ಸೆಲ್ಫಿಗೆ ಹುಚ್ಚಿಗೆ ರೈಲು ಹಳಿ ಮೇಲೆ ಬಿತ್ತು ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಹೆಣ
Advertisement
ಅಪಘಾತ ನಡೆಯುವಾಗ ಸೆಲ್ಫೀ ತೆಗೆದುಕೊಳ್ಳುತ್ತಿದ್ದನೋ ಇಲ್ಲವೂ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಇದು ಒಂದು ಅಪಘಾತ. ಇದರ ಬಗ್ಗೆ ಎಲ್ಲಾ ಕಡೆಯಿಂದ ತನಿಖೆ ನಡೆಯುತ್ತದೆ. ಈ ಘಟನೆಯ ಬಗ್ಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.