ಬೆಂಗಳೂರಿನಲ್ಲಿ ಚಪ್ಪಲಿ, ಶೂ ಕಳ್ಳರ ಹಾವಳಿ

Public TV
1 Min Read
Shoe Theft copy

ಬೆಂಗಳೂರು: ಮನೆಯ ಮುಂದೆ ಬಿಟ್ಟಿರುವ ಚಪ್ಪಲಿ, ಶೂಗಳನ್ನು ಕಳ್ಳರು ಬಿಡುತ್ತಿಲ್ಲ. ಬೆಂಗಳೂರಿನಲ್ಲಿ ಚಪ್ಪಲಿ ಕಳ್ಳರ ಗ್ಯಾಂಗ್ ಪ್ರತ್ಯಕ್ಷವಾಗಿದ್ದು, ಮನೆಯ ಮುಂದೆ ಇರುವ ಬ್ರ್ಯಾಂಡೆಡ್ ಶೂ, ಚಪ್ಪಲಿಗಳನ್ನು ಕದಿಯುತ್ತಿದ್ದಾರೆ. ಈ ಎಲ್ಲ ದೃಶ್ಯಗಳು ಥಣಿಸಂದ್ರದ ಭುವನೇಶ್ವರಿ ನಗರದ ಅಪಾರ್ಟ್ ಮೆಂಟ್ ನಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಧ್ಯರಾತ್ರಿ ಆಟೋದಲ್ಲಿ ಬರುವ ಮೂವರು ಅಪಾರ್ಟ್ ಮೆಂಟ್ ನೊಳಗೆ ನುಗ್ಗಿದ್ದಾರೆ. ಮನೆಯ ಮುಂಭಾಗ ಇರಿಸಿರುವ ಕೇವಲ ಬ್ರ್ಯಾಂಡೆಡ್ ಶೂ ಮತ್ತು ಚಪ್ಪಲಿಗಳನ್ನು ಕದ್ದು ಮೂಟೆಯಲ್ಲಿ ತುಂಬಿಕೊಂಡಿದ್ದಾರೆ. ಎಲ್ಲವನ್ನು ಆಟೋದಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ.

ಕಟ್ಟಡದಲ್ಲಿ ಸಿಸಿಟಿವಿ ಕಂಡ ಕಳ್ಳನೋರ್ವ ಕದ್ದ ಶೂಗಳನ್ನು ಮುಖಕ್ಕೆ ಹಿಡಿದುಕೊಂಡು ಎಸ್ಕೇಪ್ ಆಗಿದ್ದಾನೆ. ಮತ್ತೋರ್ವನ ಮುಖ ಚಹರೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article