ಬೆಂಗಳೂರು: ನಗರದ ರಸ್ತೆಗಳಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟ ಎನ್ನುವಂತಿದೆ. ಇಂಥದ್ದರಲ್ಲಿ ಫುಟ್‌ಪಾಥ್ ಇದ್ದರೂ ಓಡಾಡದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ. ಕಾಮಗಾರಿ ಹೆಸರಿನಲ್ಲಿ ಫುಟ್‌ಪಾತ್ ಅಗೆದು ಜನರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ.
ವಾಹನ ಸಂಚರಿಸುವ ರಸ್ತೆಯಲ್ಲಿ ಪಾದಾಚಾರಿಗಳು ಸಂಚರಿಸಬಾರದು. ಫುಟ್‌ಪಾತ್ ಮೂಲಕವೇ ಸಂಚರಿಸಬೇಕು ಎನ್ನುತ್ತದೆ ಸಂಚಾರ ಪೊಲೀಸ್ ಇಲಾಖೆ. ಆದರೆ, ನಗರದ ಹೃದಯ ಭಾಗದ ರಸ್ತೆಯಲ್ಲಿ ಸಂಚರಿಸಲು ಸಾವಿರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಸಿವಿಲ್ ಕೋರ್ಟ್, ಬೆಂಗಳೂರು ವಿವಿ, ಆರ್ಟ್ಸ್ ಕಾಲೇಜ್, ಸೈನ್ಸ್ ಕಾಲೇಜ್ ಇರೋ ರಸ್ತೆಯ ಎರಡೂ ಬದಿಯ ಫುಟ್‌ಪಾತನ್ನು ಕಾಮಗಾರಿ ಎಂದು ಹಾಳು ಮಾಡಿದ್ದಾರೆ. ಇದರಿಂದ ಜನರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿದೆ.
ಅಭಿವೃದ್ಧಿ ಮಾಡ್ಲಿ. ಆದರೆ, ಅದನ್ನ ವೇಗವಾಗಿ ಮಾಡಬೇಕು. ಕಾಮಗಾರಿ ಎಂದು ಸಂಪೂರ್ಣ ಫುಟ್‌ಪಾತ್ ಹಾಳು ಮಾಡಿದ್ದು, ಎಲ್ಲಿಯೂ ಓಡಾಡದಂತಾಗಿದೆ. ಯಾವಾಗ್ಲೂ ಬ್ಯುಸಿ ಇರೋ ರಸ್ತೆ ಇದು. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಬೇಗ ಬೇಗ ಕಾಮಗಾರಿ ಮುಗಿಸದೇ ನಮಗೆ ನರಕ ತೋರಿಸುತ್ತಿದ್ದಾರೆ. ದಯವಿಟ್ಟು ಬೇಗ ಕಾಮಗಾರಿ ಮುಗಿಸಿ ನಮಗೆ ಸಮಸ್ಯೆ ಇಲ್ಲದಂತೆ ಸಂಚರಿಸುವಂತೆ ಮಾಡಿ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.
ಸಿವಿಲ್ ಕೋರ್ಟ್, ಬೆಂಗಳೂರು ವಿವಿ, ಆರ್ಟ್ಸ್ ಕಾಲೇಜ್, ಸೈನ್ಸ್ ಕಾಲೇಜ್ ಇರುವ ರಸ್ತೆಯ ಎರಡೂ ಬದಿಯ ಫುಟ್‌ಪಾತ್ ಅಗೆಯಲಾಗಿದೆ. ಆದರೆ ಬೇಗ ಕಾಮಗಾರಿ ಮುಗಿಸಿ ಓಡಾಟಕ್ಕೆ ಅನುವು ಮಾಡಿಕೊಡದೆ ಇರೋದು ನಿತ್ಯ ಓಡಾಡೋ ಜನರಿಗೆ ತೊಂದರೆ ಆಗುತ್ತಿದೆ.
ನಗರದ ಬಹುತೇಕ ರಸ್ತೆಗಳ ಅಕ್ಕಪಕ್ಕ ಪುಟ್‌ಪಾತ್‌ಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಅದರ ವೇಗ ಆಮೆಗತಿಯಾಗಿದೆ. ಇದರಿಂದ ಬೆಂಗಳೂರಿಗರು ಫುಟ್‌ಪಾತ್ ಮೇಲೆ ಓಡಾದದಂತಾಗಿದೆ.