ಕೋಲ್ಕತ್ತಾ: ಫುಟ್‌ಬಾಲ್ ದಂತಕತೆ, ಅರ್ಜೆಂಟೀನಾದ (Argentine) ಲಿಯೋನಲ್ ಮೆಸ್ಸಿ (Lionel Messi) ಇಂದು (ಡಿ.12) ರಾತ್ರಿ ಭಾರತಕ್ಕೆ ಆಗಮಿಸಲಿದ್ದಾರೆ.
`ಗೋಟ್ ಇಂಡಿಯಾ ಟೂರ್ 25′ ಹೆಸರಿನಲ್ಲಿ ಕೋಲ್ಕತ್ತಾಗೆ (Kolkatta) ಬರಲಿರುವ ಲಿಯೋನಲ್ ಮೆಸ್ಸಿ 3 ದಿನಗಳ ಕಾಲ ಭಾರತದಲ್ಲಿ (India) ಇರಲಿದ್ದಾರೆ. ಮೆಸ್ಸಿ ಜೊತೆಗೆ ಟೀಮ್‌ಮೇಟ್‌ಗಳಾದ ಲೂಯಿಸ್ ಸುರೇಜ್, ರೋಡ್ರಿಗೋ ಡಿ ಪೌಲ್ ಕೂಡ ಇರಲಿದ್ದಾರೆ.ಇದನ್ನೂ ಓದಿ: ನಿವೃತ್ತಿಯಿಂದ ಹಿಂದೆ ಸರಿದ ವಿನೇಶ್ ಫೋಗಟ್ – 2028ರ ಒಲಿಂಪಿಕ್ಸ್‌ನಲ್ಲಿ ಅಖಾಡಕ್ಕಿಳಿಯುವುದಾಗಿ ಘೋಷಣೆ
ಶನಿವಾರ (ಡಿ.13) ಬೆಳಗ್ಗೆ ಕೋಲ್ಕತ್ತಾದ ಶ್ರೀಭೂಮಿ ಸ್ಫೋರ್ಟ್ ಕ್ಲಬ್‌ನಲ್ಲಿ ನಿರ್ಮಿಸಲಾಗಿರುವ ತನ್ನ 70 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸೌರವ್ ಗಂಗೂಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ನಂತರ ಸಂಜೆ 7 ಗಂಟೆಗೆ ಹೈದ್ರಾಬಾದ್‌ನ (Hyderabad) ರಾಜೀವ್‌ಗಾಂಧಿ ಇಂಟರ್‌ನ್ಯಾಷನಲ್ ಮೈದಾನದಲ್ಲಿ ಒಂದು ಸೌಹಾರ್ದ ಪಂದ್ಯ, ಸಂಗೀತ ಕಾರ್ಯಕ್ರಮ ನಡೆಯಲಿದೆ.
ಡಿ.14ಕ್ಕೆ ಮುಂಬೈನಲ್ಲಿ (Mumbai) ಸೆಲೆಬ್ರಿಟಿ ಫುಟ್‌ಬಾಲ್ ಪಂದ್ಯ ಇರಲಿದೆ. ಈ ವೇಳೆ ಸಚಿನ್, ಶಾರೂಕ್ ಸೇರಿದಂತೆ ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ. ಬಳಿಕ ಡಿ.15ಕ್ಕೆ ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು (PM Modi) ಭೇಟಿಯಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ ಜೇಟ್ಲಿ ಮೈದಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ವಾಪಸ್ ತೆರಳಲಿದ್ದಾರೆ.ಇದನ್ನೂ ಓದಿ: ಗಾಯಕ ಜುಬೀನ್ ಗರ್ಗ್ ಸಾವಿನ ತನಿಖೆ – 3,500 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

