ಮಡಿಕೇರಿ: ಕುಸಿದು ಬಿದ್ದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food Supply Department) ಉಪ ನಿರ್ದೇಶಕ ಸಾವನ್ನಪ್ಪಿದ ಘಟನೆ ಮಡಿಕೇರಿಯಲ್ಲಿ (Madikeri) ನಡೆದಿದೆ.
ಮೃತ ಅಧಿಕಾರಿಯನ್ನು ಶ್ರೀಧರ್ ಮೂರ್ತಿ ಎಂದು ಗುರುತಿಸಲಾಗಿದೆ. ಎಂದಿನಂತೆ ಅವರು ಕಚೇರಿಗೆ ಬಂದಿದ್ದರು. ಇಂದು (ಮಂಗಳವಾರ) ಕಚೇರಿಯಲ್ಲಿ ಸಭೆ ಇತ್ತು. ಸಭೆಗೆ ಮುನ್ನವೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದ್ದಾರೆ.
28 ದಿನಗಳ ಹಿಂದಷ್ಟೇ ಅವರು ಕೊಡಗು ಆಹಾರ ಮತ್ತು ನಾಗರಿಕ ಸರಬರಾಜು ಡಿಡಿ ಆಗಿ ಬಂದಿದ್ದರು. ಮೂಲತಃ ಚಿತ್ರದುರ್ಗ (Chitradurga) ಜಿಲ್ಲೆಯವರು ಎಂದು ತಿಳಿದು ಬಂದಿದೆ.