ರಾಯಚೂರು: ನಗರದಲ್ಲಿ ರಾತ್ರೋರಾತ್ರಿ ಏಕಾಏಕಿ ಹೋಟೆಲ್, ಬೇಕರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ತಂಡ ರಾಸಾಯನಿಕ ಬಣ್ಣಗಳ ಬಳಕೆ, ನಿಷೇಧಿತ ಪ್ಲಾಸ್ಟಿಕ್ ಬಳಕೆ, ಆಹಾರ ಸುರಕ್ಷತೆ ನಿಯಮ ಉಲ್ಲಂಘಿಸಿದ ಮಾಲೀಕರಿಗೆ ದಂಡ ವಿಧಿಸಿದೆ.
ನಗರದ ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆಯ ಹೋಟೆಲ್‌ಗಳ ಮೇಲೆ ರಾಯಚೂರು (Raichur) ಉಪವಿಭಾಗ ಸಹಾಯಕ ಆಯುಕ್ತ ಗಜಾನನ ಬಾಳೆ ನೇತೃತ್ವದಲ್ಲಿ ದಾಳಿ ನಡೆದಿದೆ. ರಾಯಚೂರು ತಹಶೀಲ್ದಾರ್ ಹಾಗೂ ಎಫ್‌ಎಸ್‌ಎಸ್‌ಎಐ ಅಧಿಕಾರಿಗಳ ತಂಡ ಸುಮಾರು 10 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದೆ. ಇದನ್ನೂ ಓದಿ: ಕೊಪ್ಪಳ | ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ – 35 ಟನ್ ರೇಷನ್ ಸಾಗಿಸ್ತಿದ್ದ ಲಾರಿ ವಶಕ್ಕೆ
ಮಾಂಸಾಹಾರ ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣಗಳ ಬಳಕೆ ಪತ್ತೆಯಾಗಿದೆ. ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿರುವ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ 50 ಸಾವಿರ ರೂ. ದಂಡ ವಿಧಿಸಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.