ಮೈಸೂರು: ಆಹಾರ ಹುಡುಕಿಕೊಂಡ ನಾಡಿಗೆ ಬಂದಿದ್ದ ಹೆಣ್ಣು ಚಿರತೆಯೊಂದು ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಜಿಯಾರ ಗ್ರಾಮದ ಬಳಿ ನಡೆದಿದೆ.
ಆಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುವ ಕಾಡು ಪ್ರಾಣಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗೆ ನಾಡಿಗೆ ಬಂದ ಕಾಡು ಪ್ರಾಣಿಗಳು ಜನರಿಗೆ ತೊಂದರೆ ಕೊಡುವುದರ ಜೊತೆಗೆ ತಾವು ತೊಂದರೆಗೆ ಸಿಲುಕುತ್ತಿವೆ. ಆಹಾರ ಅರಸಿ ನಾಡಿಗೆ ಬಂದ 4 ವರ್ಷದ ಹೆಣ್ಣು ಚಿರತೆ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಸಾವನ್ನಪ್ಪಿದೆ.
Advertisement
Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ಬಂದಿದ್ದ ಚಿರತೆ ಗ್ರಾಮ ಪಂಚಾಯತಿಗೆ ಸೇರಿದ ಕುಡಿಯುವ ನೀರಿನ ಪಂಪ್ ಸೆಟ್‍ಗೆ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದೆ. ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲಿಯೆ ಮೃತಪಟ್ಟಿದೆ. ಎಚ್.ಡಿ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.