ದಾವಣಗೆರೆ: ಪ್ರತಿದಿನ ಕಾಲೇಜು, ಓದು, ಎಕ್ಸಾಂ ಅಂತ ಟೆನ್ಷನ್‍ನಲ್ಲಿರುತ್ತಿದ್ದ ಸ್ಟೂಡೆಂಟ್ಸ್ ಗೆ ಸುಂದರೇ ಲೋಕವೇ ತೆರೆದುಕೊಂಡಿತ್ತು. ಇಲ್ಲಿ ಕೇವಲ ಎಂಜಾಯ್ ಮಾಡೋದಷ್ಟೇ ಅಲ್ಲ, ಮುಂದಿನ ಭವಿಷ್ಯವೇ ಕಣ್ಣಿಗೆ ಕಟ್ಟುವಂತಿತ್ತು.
ದಾವಣಗೆರೆಯ ಬಿ.ಎಸ್.ಚನ್ನಬಸಪ್ಪ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಕಾಲೇಜಿನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿತ್ತು. ಬಿಬಿಎಂ, ಕಾಮರ್ಸ್ ಸ್ಟೂಡೆಂಟ್ಸ್ ಪಾಲ್ಗೊಂಡಿದ್ದು ತಾವು ಶಿಕ್ಷಣ ಮುಗಿಸಿದ ನಂತರ ಬ್ಯುಸಿನೆಸ್ ಮಾಡೋವಾಗ ಏನೆಲ್ಲ ಸ್ಟ್ರಾಟಜಿ ಮಾಡಬೇಕು ಎನ್ನುವುದನ್ನು ಕಲಿತರು.
Advertisement
Advertisement
ಫುಡ್ ಫೆಸ್ಟಿವಲ್‍ಗೂ ಮುನ್ನ ವಿದ್ಯಾರ್ಥಿಗಳು ತಯಾರಿಸುವ ಖಾದ್ಯಕ್ಕೆ ಟಿಕೆಟ್ ನೀಡಿದರು. ಸುಮಾರು 3 ಸಾವಿರ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದವು. ಕಾಲೇಜು ಹೊರತಾಗಿ ಹೊರಗಿನವರು ಬಂದು ಖಾದ್ಯವನ್ನು ಸವಿದು ಸಂತಸಪಟ್ಟರು. ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಅಡಿಪಾಯ ಆಗಿದೆ ಎಂದು ಉಪನ್ಯಾಸಕರು ಹೇಳಿದ್ದಾರೆ.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv