ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಹೀಗಾಗಿ ದಿನಪೂರ್ತಿ ಮನೆಯಲ್ಲಿಯೇ ಇರಬೇಕು. ಬೇಸರವಾದಾಗ ಹೊರಗೆ ಹೋಗಿ ಏನಾದರೂ ತಿಂದುಕೊಂಡು ಬರೋಣ ಎಂದರೂ ಆಗುವುದಿಲ್ಲ. ಇತ್ತ ಮನೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಇರುವುದರಿಂದ ರುಚಿರುಚಿಯಾದ ಅಡುಗೆ ಕೇಳುತ್ತಿರುತ್ತಾರೆ. ಹೀಗಾಗಿ ದೋಸೆ, ಚಪಾತಿ, ರೊಟ್ಟಿಗೆ ಅದೇ ಚಟ್ನಿ, ಪಲ್ಯ ತಿಂದು ಬೇಸರವಾಗಿರುತ್ತದೆ. ಆದ್ದರಿಂದ ನಿಮಗಾಗಿ ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಆಲೂ, ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ಮಾಡುವ ವಿಧಾನ ಇಲ್ಲಿದೆ…
Advertisement
ಬೇಕಾಗುವ ಸಾಮಗ್ರಿಗಳು
1. ಮೈಸೂರು ಬದನೆಕಾಯಿ – 3 ರಿಂದ 4
2. ಆಲೂಗಡ್ಡೆ – 2
3. ಮೆಣಸಿನಕಾಯಿ – 2
4. ಕರಿಬೇವು – 4 ರಿಂದ 5
5. ಈರುಳ್ಳಿ – 1
6. ಟೊಮೆಟೊ- 1
7. ಜೀರಿಗೆ – 1/2 ಟೀ ಸ್ಪೂನ್
8. ಗರಂ ಮಸಾಲ – 1/2 ಟೀ ಸ್ಪೂನ್
9. ಖಾರದ ಪುಡಿ – 1 ಟೀ ಸ್ಪೂನ್
10. ಅರಿಶಿಣ – ಚಿಟಿಕೆ
11. ಉಪ್ಪು – ರುಚಿಗೆ ತಕ್ಕಷ್ಟು
12. ಎಣ್ಣೆ – ಒಗ್ಗರಣೆಗೆ
Advertisement
Advertisement
ಮಾಡುವ ವಿಧಾನ
* ಆಲೂಗಡ್ಡೆಯ ಸಿಪ್ಪೆ ತೆಗೆದು ಉದ್ದವಾಗಿ ಕತ್ತರಿಸಿಕೊಳ್ಳಿ. ಹಾಗೆಯೇ ಮೈಸೂರು ಬದನೆಕಾಯಿಯನ್ನು ತೊಳೆದುಕೊಂಡು ಕತ್ತರಿಸಿಕೊಳ್ಳಿ.
* ಗ್ಯಾಸ್ ಆನ್ ಮಾಡ್ಕೊಂಡು ಪ್ಯಾನ್ ಇಟ್ಟು ಮೂರು ಚಮಚ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿಕೊಳ್ಳಿ. ಜೀರಿಗೆ ಫ್ರೈ ಆಗ್ತಿದ್ದಂತೆ ಈರುಳ್ಳಿ, ಕರಿಬೇವು, ಹಸಿ ಮೆಣಸಿನಕಾಯಿ ಮತ್ತು ಟೊಮೆಟೊ ಹಾಕಿ ಫ್ರೈ ಮಾಡಿಕೊಳ್ಳಿ.
* ಹಸಿ ವಾಸನೆ ಕಡಿಮೆಯಾಗ್ತಿದ್ದಂತೆ ಕತ್ತರಿಸಿದ ಆಲೂಗಡ್ಡೆ ಮಿಕ್ಸ್ ಮಾಡಿ 4 ರಿಂದ 5 ನಿಮಿಷ ಚೆನ್ನಾಗಿ ಬೇಯಿಸಿ.
* ಆಲೂಗಡ್ಡೆ ಸಾಫ್ಟ್ ಆಗುತ್ತಿದ್ದಂತೆ ಬದನೆಕಾಯಿ ಮಿಕ್ಸ್ ಮಾಡಿ ಬಾಡಿಸಿಕೊಳ್ಳಿ. ಬದನೆಕಾಯಿ ಹಾಕುತ್ತಿದ್ದಂತೆ ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ಖಾರದ ಪುಡಿ ಹಾಕಿ ಫ್ರೈ ಮಾಡಿಕೊಳ್ಳಿ
* ಈಗ 1/4 ಲೋಟ ನೀರು ಹಾಕಿ ಮೂರು ನಿಮಿಷ ಬೇಯಿಸಿ (ನೀರು ಸಂಪೂರ್ಣವಾಗಿ ಹೀರಿಕೊಳ್ಳೋವರೆಗೂ ಬೇಯಿಸಿ) ದರೆ ಆಲೂ-ಬದನೆಕಾಯಿ ಮಿಕ್ಸಡ್ ಡ್ರೈ ಫ್ರೈ ರೆಡಿ