ಮಂಡ್ಯ: ಲೋಕಸಭಾ ಚುನಾವಣೆಯ ಮೈತ್ರಿ ಪಕ್ಷದ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಅವರ ಅಭಿಮಾನಿಗಳು ರಥೋತ್ಸವದ ಸಂದರ್ಭದಲ್ಲಿ ಹರಕೆ ಹೊತ್ತಿದ್ದಾರೆ.
ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ 7 ಗ್ರಾಮಗಳು ಸೇರಿ ಆಚರಿಸುವ ಪಟ್ಟಲದಮ್ಮ ದೇವಿ ರಥೋತ್ಸವದಲ್ಲಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಈ ರಥೋತ್ಸವ ಶನಿವಾರ ರಾತ್ರಿ ನಡೆದಿದ್ದು, ಈ ವೇಳೆ ಅಭಿಮಾನಿಗಳು ತಮ್ಮ ಹರಕೆಯನ್ನು ತೀರಿಸಿದ್ದಾರೆ.
Advertisement
Advertisement
ಅಭಿಮಾನಿಗಳು ರಥೋತ್ಸವದ ವೇಳೆ ಎಸೆಯುವ ಬಾಳೆಹಣ್ಣಿನ ಮೇಲೆ ‘ನಿಖಿಲ್ ಎಲ್ಲಿದ್ದಿಯಪ್ಪ, ಸಂಸತ್ ಹೋಗೋಕ್ಕೆ ರೆಡಿ ಆಗುತ್ತಿದ್ದೀನಿ’, ‘ಕರ್ನಾಟಕಕ್ಕೆ ಕುಮಾರಣ್ಣ, ಮಂಡ್ಯಕ್ಕೆ ನಿಖಿಲ್ ಅಣ್ಣ’ ಹಾಗೂ ‘ಮಂಡ್ಯದ ಹೆಮ್ಮೆಯ ಎಂಪಿ ನಿಖಿಲ್’ ಎಂದು ಬರೆದಿದ್ದರು.
Advertisement
ನಾವು ಹರಕೆ ಹೊತ್ತಿದ್ದನು ನೆನಪು ಮಾಡಿಕೊಂಡು ಶ್ರದ್ಧೆಯಿಂದ ರಥದ ಮೇಲೆ ಎಸದರೆ ತಮ್ಮ ಹರಕೆ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ಅಭಿಮಾನಿಗಳು ಈ ರೀತಿ ಬಾಳೆಹಣ್ಣಿನ ಮೇಲೆ ಬರೆದು, ರಥೋತ್ಸವದ ವೇಳೆ ರಥದ ಮೇಲೆ ಹರಕೆಯಿಟ್ಟು ಎಸೆದಿದ್ದಾರೆ.