ಚಿಕ್ಕಬಳ್ಳಾಪುರ: ಎರಡನೇ ಬಾರಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಾ.ಕೆ.ಸುಧಾಕರ್ ಅವರನ್ನ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿಸುವುದರ ಮೂಲಕ ಶಾಸಕ ಸುಧಾಕರ್ ಬೆಂಬಲಿಗರು ವಿಶೇಷ ಸನ್ಮಾನ ನೇರವೇರಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ವೃತ್ತದಿಂದ ಶ್ರೀ ಭೋಗನಂಧಿಶ್ವರ ದೇವಾಲಯದ ಮುಂಭಾಗದವರೆಗೂ ಶಾಸಕ ಸುಧಾಕರ್ ಹಾಗೂ ಅವರ ತಂದೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೇಶವರೆಡ್ಡಿ ಅವರನ್ನು ಕುಳ್ಳಿರಿಸಿ ಸುಧಾಕರ್ ಬೆಂಬಲಿಗರು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಸಿದರು.
Advertisement
Advertisement
ಅಂದ ಹಾಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಬಾರಿ ಮರು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿರುವ ಶಾಸಕ ಸುಧಾಕರ್ ಗೆ ಸುಧಾಕರ್ ಬೆಂಬಲಿಗರು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ರು. ಹೀಗಾಗಿ ಶ್ರೀ ಭೋಗನಂಧಿಶ್ವರ ದೇಗುಲಕ್ಕೆ ಭೇಟಿ ನೀಡಿದ ಶಾಸಕ ಸುಧಾಕರ್ ಶ್ರೀ ಭೋಗನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಸುಧಾಕರ್ ಗೆ ವಿಶೇಷ ಸನ್ಮಾನ ನೇರವೇರಿಸಿದರು. ಇದನ್ನೂ ಓದಿ: ಜೆಡಿಎಸ್ ಮಂತ್ರಿಗಳು ಈಗ ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಿದ್ದಾರೆ- ಸಿದ್ದರಾಮಯ್ಯ ಪರ ಶಾಸಕ ಸುಧಾಕರ್ ಬ್ಯಾಟಿಂಗ್
Advertisement
ಎರಡನೇ ಬಾರಿ ಶಾಸಕರಾಗಲಿ ಹಾಗೂ ಅತೀ ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲಿ ಅಂತ ಭೋಗನಂದೀಶ್ವರನಿಗೆ ಹರಕೆ ಹೊತ್ತಿಕೊಂಡಿದ್ದ ಬೆಂಬಲಿಗರು, ಹರಕೆಯಂತೆ ಇಂದು 1001 ತೆಂಗಿನಕಾಯಿ ಹೊಡೆಯುವುದರ ಮೂಲಕ ತಮ್ಮ ಹರಕೆ ತೀರಿಸಿಕೊಂಡರು. ಮತ್ತೊಂದೆಡೆ ಅನ್ನಸಂತರ್ಪಣೆ ಕೂಡ ಆಯೋಜನೆ ಮಾಡಿ ಶಾಸಕ ಸುಧಾಕರ್ ಗೆ ಸಚಿವ ಸ್ಥಾನ ಸಿಗಲಿ ಅಂತ ದೇವರಿಗೆ ಮೊರೆಯಿಟ್ಟಿರು.