ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ತಾಯಿ ನೀಡಿರೋ ಹೇಳಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಇದರಿಂದ ಕಾಂಗ್ರೆಸ್‍ನೊಳಗೆ ಎಲ್ಲವು ಸರಿಯಿಲ್ಲ ಎಂಬ ಸಂದೇಶ ರವಾನೆ ಆಗ್ತಿರುವ ಬಗ್ಗೆ ಕೆಪಿಸಿಸಿಯಲ್ಲಿ ಆತಂಕ ಎದುರಾಗಿದೆ.
ಸಚಿವ ಡಿಕೆಶಿ ತಾಯಿ ಗೌರಮ್ಮ ಮಾಧ್ಯಮಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಡಿ.ಕೆ. ಸುರೇಶ್ ಆಪ್ತರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಗೌರಮ್ಮ ಕಾಣದಂತೆ ಕೋಡಿಹಳ್ಳಿ ಮನೆಗೆ ಡಿ.ಕೆ ಶಿವಕುಮಾರ್ ಬೆಂಬಲಿಗರ ಕಾವಲು ಕಾಯುತ್ತಿದ್ದಾರೆ. ಮಾಧ್ಯಮಗಳಿಗೆ ಪಕ್ಷದ ನಾಯಕರ ವಿರುದ್ಧ ಯಾರೂ ಹೇಳಿಕೆ ನೀಡದಂತೆ ಡಿ.ಕೆ ಸುರೇಶ್ ಬೆಂಬಲಿಗರಿಗೆ ಸೂಚನೆಯನ್ನು ಈಗಾಗಲೇ ನೀಡಿಲಾಗಿದೆ.
Advertisement
ಸಿಎಂ ವಿರುದ್ಧ ಗೌರಮ್ಮ ಹೇಳಿದ್ದು ಏನು?
ಸಿಎಂ ಸಿದ್ದರಾಮಯ್ಯ ನನ್ನ ಮಗನಿಂದ ಮುಂದೆ ಬಂದಿದ್ದಾರೆ. ಸಿದ್ದರಾಮಯ್ಯ ನಂಬಿಸಿ ಕತ್ತು ಕುಯ್ಯುತ್ತಿದ್ದಾರೆ. ನನ್ನ ಮಕ್ಕಳನ್ನು ಕಂಡ್ರೆ ಅವರಿಗೆ ಆಗಿ ಬರೋದಿಲ್ಲ. ಅಕ್ಕಿ ಕೊಟ್ಟೆ, ಅದು ಕೊಟ್ಟೆ ಎಲ್ಲಾ ಕೊಟ್ರೂ ಅದೇನು ಅವರ ಮನೆಯಿಂದ ಕೊಟ್ಟಿಲ್ಲ. ರೈತರು ಬೆಳೆದಿದ್ದ ಅಕ್ಕಿಯನ್ನು ಕೊಟ್ಟಿದ್ದಾರೆ. ನನ್ನ ಮಕ್ಕಳ ಮನೆ ಮೇಲೆ ದಾಳಿ ನಡೆದರೂ ಸಿದ್ದರಾಮಯ್ಯ ಯಾಕೆ ಸುಮ್ಮನಿದ್ದಾರೆ? ಸಿದ್ದರಾಮಯ್ಯ ನನ್ನ ಮಕ್ಕಳ ಮೇಲೆ ಕತ್ತಿ ಮಸಿಯುತ್ತಿದ್ದಾರೆ. ಅವರಿಗೆ ಅಧಿಕಾರಿಗಳನ್ನು ಪ್ರಶ್ನಿಸುವ ಹಕ್ಕಿದ್ದರೂ ಸುಮ್ಮನಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
Advertisement
ನಮ್ಮ ಮನೆಯ ಮೇಲೆ ಐಟಿ ದಾಳಿ ನಡೆಯೋದಕ್ಕೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇರ ಹೊಣೆ ಆಗುತ್ತಾರೆ. ಇದರ ಪ್ರತಿಫಲವನ್ನು ಮುಂದೊಂದು ದಿನ ಅನುಭವಿಸುತ್ತಾರೆ. ರಾಜ್ಯಾದ್ಯಂತ ನನ್ನ ಮಕ್ಕಳ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆಲ್ಲ ನನ್ನ ಧನ್ಯವಾದಗಳು. ರಾಜ್ಯದ ಬಿಜೆಪಿ, ಜನತಾದಳ ಎಲ್ಲಾ ಪಕ್ಷದವರು ನಮಗೆ ಸಹಾಯ ಮಾಡಿದ್ದಾರೆ. ಮುಂದೊಂದು ದಿನ ನನ್ನ ಮಕ್ಕಳು ನಿಮ್ಮ ಋಣ ತೀರುಸ್ತಾರೆ. ನನ್ನ ಮಕ್ಕಳು ತುಂಬಾ ಪವಿತ್ರವಾದವರು. ಅವರಿಗೆ ಮೋಸ ಮಾಡಬೇಕು ಎಂಬ ಮನಸ್ಸಿಲ್ಲ. ತಪ್ಪು ಮಾಡುವ ಮಕ್ಕಳನ್ನು ನಾನು ಹೆತ್ತಿಲ್ಲ ಅಂತ ಹೇಳಿದ್ದರು.
Advertisement
ಸಿಎಂ ವಿರುದ್ಧ ಕಿಡಿಕಾರಿದ ಡಿಕೆ ಶಿವಕುಮಾರ್ ತಾಯಿ-ವಿಡಿಯೋ ನೋಡಿhttps://t.co/I8bG2l3iXu#DKShivakumar #Congress #ITraid #Siddaramaiah pic.twitter.com/GOhKNuWS5B
— PublicTV (@publictvnews) August 3, 2017
Advertisement