ಚಳಿಗಾಲದಲ್ಲಿ (Winter) ತುಟಿಗಳು ಒಡೆಯುವ ಸಾಧ್ಯತೆ ಜಾಸ್ತಿ. ಅಲ್ಲದೆ ತುಟಿಗಳು ಒಣಗುವ ಮತ್ತು ಕಪ್ಪಾಗುವ ಸಂಭವವಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ, ತುಟಿ ಒಡೆದು ರಕ್ತ ಕಾಣಿಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಹೀಗಾಗಿ ಚಳಿಗಾಲದಲ್ಲಿ ತುಟಿಯ ಬಗ್ಗೆ ಕಾಳಜಿ ಅಗತ್ಯ. ಈ ಸಲಹೆಗಳನ್ನು ಪಾಲಿಸಿದರೆ ಗುಲಾಬಿ ಬಣ್ಣದ ಸುಂದರ ತುಟಿಗಳು ನಿಮ್ಮದಾಗುತ್ತವೆ.
Advertisement
ಚಳಿಗಾಲದಲ್ಲಿ ತುಟಿಗಳ (Lip Care) ಮೇಲೆ ಸತ್ತ ಜೀವಕೋಶಗಳು ಹೆಚ್ಚು ಸಂಗ್ರಹಗೊಳ್ಳುತ್ತವೆ. ಆದ್ದರಿಂದ ಎರಡು ಅಥವಾ ಮೂರು ದಿನಗಳ ಕಾಲ ನಿಮ್ಮ ತುಟಿಗಳನ್ನು ಸ್ಕ್ರಬ್ ಮಾಡುತ್ತಿರಿ. ಕಾಫಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಸ್ಕ್ರಬ್ಬರ್ ಆಗಿ ಬಳಸಬಹುದು. ಸಕ್ಕರೆ ಮತ್ತು ನಿಂಬೆ ರಸದೊಂದಿಗೂ ಸ್ಕ್ರಬ್ ಮಾಡಬಹುದು.
Advertisement
Advertisement
ಸೌತೆಕಾಯಿ ರಸವನ್ನು ತುಟಿಗಳ ಮೇಲೆ ಹಚ್ಚುವುದರಿಂದ ಕಪ್ಪು ಕಲೆಗಳು ನಿವಾರಣೆಯಾಗುತ್ತವೆ. ನಿಂಬೆ-ಜೇನು ಮಿಶ್ರಣವನ್ನು ಸಹ ಬಳಸಬಹುದು. ಇದರೊಂದಿಗೆ ನಿಂಬೆ, ಆಲೂಗಡ್ಡೆ ಮತ್ತು ಬೀಟ್ರೂಟ್ ರಸವನ್ನು ರಾತ್ರಿ ವೇಳೆ ತುಟಿಗಳಿಗೆ ಹಚ್ಚಿ, ಬೆಳಗ್ಗೆ ತೊಳೆಯಬಹುದು. ಈ ಮೂಲಕ ನೀವು ತುಟಿಯ ಕಪ್ಪು ಕಲೆಗಳನ್ನು ಹೋಗಲಾಡಿಸಬಹುದು. ವಾರಕ್ಕೊಮ್ಮೆ ಈ ಮನೆಮದ್ದನ್ನು ಬಳಸಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ಕಾಣುವಿರಿ.
Advertisement
ಒಣ ತುಟಿ ಇರುವವರು ಯಾವಾಗಲೂ ಲಿಪ್ ಬಾಮ್ ಹಚ್ಚಬೇಕು. ಇದನ್ನು ಪುರುಷರು ಕೂಡಾ ಮಾಡಬಹುದು. ಇದರ ಬದಲಿಗೆ ಜೇನುತುಪ್ಪವನ್ನು ಕೂಡಾ ಪ್ರಯತ್ನಿಸಬಹುದು. ಪೆಟ್ರೋಲಿಯಂ ಜೆಲ್ಲಿ, ತೆಂಗಿನ ಎಣ್ಣೆ ಕೂಡಾ ಹಚ್ಚಬಹುದು. ಚಳಿಗಾಲದಲ್ಲಿ ಆದಷ್ಟು ಮ್ಯಾಟ್ ಲಿಪ್‌ಸ್ಟಿಕ್ ಹಚ್ಚುವುದನ್ನು ಕಡಿಮೆ ಮಾಡಿ. ಒಂದು ವೇಳೆ ಅದನ್ನೇ ಹಚ್ಚಬೇಕು ಎಂದುಕೊಂಡಿದ್ದರೆ, ಅದಕ್ಕೂ ಮೊದಲು ನಿಮ್ಮ ತುಟಿಗಳನ್ನು ಚೆನ್ನಾಗಿ ತೇವಗೊಳಿಸಿ ಸಿದ್ಧಮಾಡಿ. ಇದಕ್ಕೆ ನೀವು ಹಿಂದಿನ ದಿನವೇ ಲಿಪ್ ಬಾಮ್ ಹಚ್ಚಿ ತುಟಿಯನ್ನು ಸಿದ್ಧಗೊಳಿಸಬಹುದು.
ಚಳಿಗಾಲದಲ್ಲಿ ಕೆಲವು ಬಗೆಯ ಲಿಪ್‌ಸ್ಟಿಕ್ ಹಚ್ಚಲೇ ಬಾರದು ಎನ್ನುತ್ತಾರೆ ಸೌಂದರ್ಯ ತಜ್ಞರು. ಹೌದು. ವಿಂಟರ್ ಸೀಸನ್‌ನಲ್ಲಿ ಕಂಡ ಕಂಡ ಲಿಪ್‌ಸ್ಟಿಕ್ ಹಚ್ಚಲು ಸಾಧ್ಯವಿಲ್ಲ. ಹಚ್ಚಿದರೂ ನಿಮ್ಮ ತುಟಿಯಲ್ಲಿ ಬಿರುಕು ಮೂಡುವುದಂತೂ ಗ್ಯಾರಂಟಿ. ಅದಕ್ಕಾಗಿ ಈ ಸೀಸನ್‌ನಲ್ಲಿ ನೀವು ಯಾವ ಬಗೆಯ ಲಿಪ್‌ಸ್ಟಿಕ್ ಹಚ್ಚುವುದು ಉತ್ತಮ, ಯಾವುದು ಬೇಡ? ಎಂಬುದರ ಬಗ್ಗೆ ಸೌಂದರ್ಯ ತಜ್ಞರು ಇಲ್ಲಿ ತಿಳಿಸಿದ್ದಾರೆ.
ಮ್ಯಾಟ್ ಲಿಪ್‌ಸ್ಟಿಕ್‌ಗಳನ್ನು ಆದಷ್ಟೂ ಚಳಿಗಾಲದಲ್ಲಿ ಹಚ್ಚುವುದನ್ನು ಆವಾಯ್ಡ್ ಮಾಡಿ. ಇಲ್ಲವಾದಲ್ಲಿ ತುಟಿಯ ಆರೋಗ್ಯಕ್ಕೆ ಧಕ್ಕೆಯುಂಟಾಗುವುದು. ಯಾಕೆಂದರೇ, ಮ್ಯಾಟ್ ಲಿಪ್‌ಸ್ಟಿಕ್‌ಗಳು ತುಟಿಯನ್ನು ಡ್ರೈ ಆಗಿರಿಸುತ್ತವೆ. ಇವುಗಳಲ್ಲಿ ಗ್ಲೋಸಿ ಅಂಶವಿರುವುದಿಲ್ಲ. ಹಚ್ಚಿದ ನಂತರ ತುಟಿಗಳು ಒಣಗಿದಂತಾಗುತ್ತವೆ.
ಲಾಂಗ್ ಲಾಸ್ಟಿಂಗ್ ಹೆಸರಲ್ಲಿ ಬರುವ ಲಿಪ್‌ಸ್ಟಿಕ್‌ಗಳನ್ನು ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಹಚ್ಚಬೇಡಿ. ಇದು ಇಡೀ ದಿನವೇನೋ ನಿಮ್ಮ ತುಟಿಯಲ್ಲಿ ಉಳಿದಿರುತ್ತದೆ. ಆದರೆ ಕೊನೆಯಲ್ಲಿ ರಾತ್ರಿ ಲಿಪ್‌ಸ್ಟಿಕ್ ತೆಗೆದ ನಂತರ ಒಣಗಿದಂತಾಗಿರುತ್ತದೆ. ಇದನ್ನೂ ಓದಿ:ಗುಂಡನಿಗೆ ಸಾಥ್ ನೀಡಿದ ಧ್ರುವ ಸರ್ಜಾ: ಟೈಟಲ್ ಟೀಸರ್ ರಿಲೀಸ್
ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳನ್ನು ಆದಷ್ಟೂ ಬಳಸಬೇಡಿ. ಮಾನ್ಸೂನ್‌ನ ಮಳೆಗಾಲಕ್ಕೆ ಹೊಂದುವ ಇವು ಚಳಿಗಾಲದ ಚಳಿ-ಗಾಳಿಗೆ ಹೊಂದುವುದಿಲ್ಲ. ಬದಲಿಗೆ ಮತ್ತಷ್ಟು ತುಟಿಯ ಚರ್ಮವನ್ನು ಒಣಗಿಸಿ, ಪದರ ಪದರದಂತೆ ಬಿರುಕು ಮೂಡುತ್ತದೆ. ಹಾಗಾಗಿ ಎಚ್ಚರವಹಿಸಿ.
ಗ್ಲೋಸಿ ಲಿಪ್‌ಸ್ಟಿಕ್ಸ್ ಬೆಸ್ಟ್. ಇವು ನ್ಯಾಚುರಲ್ ಲುಕ್ ನೀಡುವುದರೊಂದಿಗೆ ಇದರೊಳಗಿರುವ ಪೆಟ್ರೊಲಿಯಂ ಜೆಲ್ಲಿ ಅಂಶಗಳು ತುಟಿಯನ್ನು ಮಾಯಿಶ್ಚರೈಸರ್‌ನಂತೆ ಕಾಪಾಡುತ್ತವೆ. ಒಣಗಲು ಬಿಡುವುದಿಲ್ಲ. ಸುಕೋಮಲವಾಗಿರುವಂತೆ ಬಿಂಬಿಸುತ್ತವೆ.