ಲೋಕ ಕಲ್ಯಾಣ, ವಿಶ್ವಶಾಂತಿಗಾಗಿ ಅಹಿಂಸಾ ಮಾರ್ಗ ಅನುಸರಿಸಿ: ಗೆಹ್ಲೋಟ್

Public TV
2 Min Read
thavarchand gehlot 1

ಬೆಂಗಳೂರು: ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಅಹಿಂಸಾ ಮಾರ್ಗ ಅನುಸರಿಸಬೇಕು ಎಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಕರೆ ನೀಡಿದ್ದಾರೆ.

ನಗರದ ಚಿಕ್ಕಪೇಟೆಯಲ್ಲಿರುವ ಉದಯ ಭಾನು ಸಾರ್ವಜನಿಕ ಆಟದ ಮೈದಾನದಲ್ಲಿ ಜೈನ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ಸದ್ಗುರು ಸಮಾಗಮ, ರಾಜೋಹರಣ್ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಹಿಂಸಾ ಮಾರ್ಗ ಅನುಸರಿಸುವ ಮೂಲಕ ಶಾಂತಿ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ವಿಧಾನಪರಿಷತ್‍ಗೆ ಕಾಂಗ್ರೆಸ್‍ನಿಂದ ಅಚ್ಚರಿಯ ಆಯ್ಕೆ – ನಾಗರಾಜ್ ಯಾದವ್, ಅಬ್ದುಲ್ ಜಬ್ಬಾರ್ ಕಣಕ್ಕೆ

thavarchand gehlot

ಜೈನ ಸಮಾಜವು ಮಾನವ ಸೇವೆಯ ಜೊತೆಗೆ ಅನೇಕ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ, ದತ್ತಿ ಕಾರ್ಯಗಳ ಮೂಲಕ ಜೈನ ಧರ್ಮದ ಕೊನೆಯ ತೀರ್ಥಂಕರರಾದ ಮಹಾವೀರರ `ಬದುಕು ಮತ್ತು ಬದುಕಲು ಬಿಡಿ’ ಎಂಬ ಅಮರ ಸಂದೇಶವನ್ನು ಈಡೇರಿಸುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ

ಜೈನ ಸಮಾಜದ ಗುರುಗಳ ಪ್ರವಚನಗಳಿಂದ ಪ್ರೇರಣೆ ಪಡೆದು ಮಾನವ ಸೇವೆ ಮಾಡುತ್ತಿರುವುದು ಸಂತಸದ ಸಂಗತಿ. ಧೀಕ್ಷೆ ಪಡೆದವರು ಕ್ರೋಧ, ಅಹಂಕಾರ, ಮೋಸ, ಆಸೆ ಇತ್ಯಾದಿಗಳನ್ನು ಜಯಿಸುತ್ತಿದ್ದಾರೆ. ಈ ಆದರ್ಶಗಳನ್ನು ಅನುಸರಿಸಲು 11 ಜನರು ರಾಜೋಹರಣ ಉತ್ಸವದಲ್ಲಿ ದೀಕ್ಷೆ ತೆಗೆದುಕೊಳ್ಳುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದು ಶ್ಲಾಘಿಸಿದ್ದಾರೆ.

thavarchand gehlot
ಸಾಂದರ್ಭಿಕ ಚಿತ್ರ

ಅಹಿಂಸೆಯ ಬೆಳಕನ್ನು ಜಾಗೃತಗೊಳಿಸುವ ಮಹತ್ತರವಾದ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಅಹಿಂಸೆ ತತ್ವ ಪಾಲಿಸುವ ಮೂಲಕ ಶಾಂತಿ ಸಮಾಜ ನಿರ್ಮಿಸಬಹುದು. ಭಾರತದಲ್ಲಿ ಇಂದಿಗೂ ಕೆಲವು ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಅಹಿಂಸಾ ಮಾರ್ಗ ಅನುಸರಿಸಬೇಕು. ವಸುಧೈವ ಕುಟುಂಬಕಂ (ಬ್ರಹ್ಮಾಂಡ ಪರಿವಾರ), ಸರ್ವೇ ಜನೋ ಸುಖಿನೋ ಭವಂತು, ಸರ್ವೇ ಸಂತುಂ ಮಾರ್ಗಗಳನ್ನು ಅನುಸರಿಸಬೇಕಿದೆ. ಲೋಕ ಕಲ್ಯಾಣ ಮತ್ತು ವಿಶ್ವಶಾಂತಿಗಾಗಿ ಮುನ್ನಡೆಯಲು ರಾಷ್ಟ್ರವ್ಯಾಪಿ ಅಹಿಂಸಾ ಮಾರ್ಗವನ್ನು ಅನುಸರಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ಶ್ರೀ ವರ್ಧಮಾನ್ ಸಾಗರ್ ಸುರೀಶ್ವರ್ ಮಹಾರಾಜ್, ವಿಜಯ್ ನರರತ್ನ ಸುರೀಶ್ವರ್ ಮಹಾರಾಜ್ ಸಾಹಿಬ್, ಸಚಿವ ಬಿ.ಸಿ.ನಾಗೇಶ್, ಸಂಸದ ಪಿ.ಸಿ.ಮೋಹನ್, ಶಾಸಕರಾದ ಉದಯ ಗರುಣಾಚಾರ್, ಜಮೀರ್ ಅಹ್ಮದ್ ಮೊದಲಾದವರು ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *