ನವದೆಹಲಿ: ಚೀನಾ (China), ಅಮೆರಿಕ (America) ಸೇರಿದಂತೆ ಕೆಲವು ದೇಶಗಳಲ್ಲಿ ಕೊರೊನಾ (Corona) ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮುಂದೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ (Hospital) ಆಕ್ಸಿಜನ್ (Oxygen), ಸಿಲಿಂಡರ್‌ಗಳ (Cylinder) ಸಾಕಷ್ಟು ದಾಸ್ತಾನು ಮತ್ತು ವೆಂಟಿಲೇಟರ್‌ಗಳಂತಹ (Ventilator) ಜೀವರಕ್ಷಕ ಸಾಧನಗಳು ಲಭ್ಯವಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
Advertisement
ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (PSA) ಆಮ್ಲಜನಕವನ್ನು ಉತ್ಪಾದಿಸುವ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳುವಂತೆ ಮತ್ತು ಅವುಗಳನ್ನು ಪರಿಶೀಲಿಸಲು ನಿಯಮಿತ ಅಣಕು ಪ್ರದರ್ಶನ ನಡೆಸುವಂತೆ ಆರೋಗ್ಯ ಸಚಿವಾಲಯವು ಹೇಳಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ, ಮುಂದೆ ಎದುರಾಗುವ ಯಾವುದೇ ಸಂದರ್ಭಗಳನ್ನು ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ನಾವು ಈ ಬಗ್ಗೆ ಈಗಿನಿಂದಲೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಇದನ್ನೂ ಓದಿ: ಊಟಕ್ಕಾಗಿ ಬಿಜೆಪಿಯಿಂದ ಕೋಟಿ-ಕೋಟಿ ಸಾರ್ವಜನಿಕರ ಹಣ ಲೂಟಿ: ಜೀತು ಪಟ್ವಾರಿ
Advertisement
Advertisement
ಎಲ್ಲಾ ಕ್ಲಿನಿಕಲ್ ಸೆಟ್ಟಿಂಗ್‍ಗಳಲ್ಲಿ ವೈದ್ಯಕೀಯ ಆಮ್ಲಜನಕವು ಪ್ರಮುಖವಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ನಿರ್ವಹಣೆಯ ಸಮಯದಲ್ಲಿ ಮತ್ತು ರೋಗಿಗಳ ಆರೈಕೆ ಮತ್ತು ಕೋವಿಡ್-19 ನಿರ್ವಹಣೆಯ ಸಮಯದಲ್ಲಿ ಜೀವಗಳನ್ನು ಉಳಿಸಲು ಆಮ್ಲಜನಕ ಪೂರೈಕೆ ನಿರ್ಣಾಯಕವಾಗಿದೆ. ಹಾಗಾಗಿ ಈ ಬಗ್ಗೆ ಗಮನಹರಿಸಿ. ಕೊರೊನಾ ಈಗ ಕಡಿಮೆಯಿದೆ ಆದರೆ ಭವಿಷ್ಯದಲ್ಲಿ ಯಾವ ರೀತಿ ಉಲ್ಬಣಗೊಳ್ಳುತ್ತೋ ಗೊತ್ತಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಸುಸ್ಥಿತಿಯಲ್ಲಿ ನೋಡಿಕೊಳ್ಳಿ. ಜೊತೆಗೆ ಐಸಿಯು ವ್ಯವಸ್ಥೆ ಸರಿಯಾಗಿ ನಿರ್ವಹಣೆ ಬಗ್ಗೆ ಕ್ರಮ ವಹಿಸಿ. ವಾರ ವಾರ ಸಭೆ ನಡೆಸಿ ಮಾಹಿತಿ ನೀಡಿ ಎಂದು ಸೂಚಿಸಿದರು. ಇದನ್ನೂ ಓದಿ: ‘ವೈ’ ಭದ್ರತೆಯಲ್ಲಿ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ವಾಕಿಂಗ್