ನವದೆಹಲಿ: ಈ ಬಾರಿಯ ಬಜೆಟ್ ನಲ್ಲಿ ರೈಲ್ವೇಗೆ 1.48 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಹಣಕಾಸು ಸಚಿವ ಅರಣ್ ಜೇಟ್ಲಿ ಪ್ರಕಟಿಸಿದ್ದಾರೆ.
– 36 ಸಾವಿರ ಕಿ.ಮೀ ರೈಲ್ವೆ ಹಳಿ ನವೀಕರಣದ ಗುರಿ.
– ಮುಂದಿನ 2 ವರ್ಷಗಳಲ್ಲಿ ಬ್ರಾಡ್ ಗೇಜ್ ಮಾರ್ಗದಲ್ಲಿನ 4267 ಹೆಸರಿಡದ ರೈಲ್ವೆ ಕ್ರಾಸಿಂಗ್‍ಗಳ ನಿರ್ಮೂಲನೆ.
– ಹಂತಹಂತವಾಗಿ ಎಲ್ಲಾ ರೈಲುಗಳಲ್ಲಿ ವೈಫೈ ಹಾಗೂ ಸಿಸಿಟಿವಿ ಸೌಲಭ್ಯ. 25 ಸಾವಿರಕ್ಕೂ ಹೆಚ್ಚಿನ ಕಾಲುದಾರಿಯ ನಿಲ್ದಾಣಗಳಲ್ಲಿ ಎಸ್ಕಲೇಟರ್‍ಗಳು.
– ಸುರಕ್ಷತೆಗೆ ಹೆಚ್ಚಿನ ಆದ್ಯತೆ, ರೈಲ್ವೆ ಹಳಿಗಳ ನಿರ್ವಹಣೆ, ತಂತ್ರಜ್ಞಾನ ಮತ್ತು ಮಂಜು ಸುರಕ್ಷತಾ ಸಾಧನಗಳ ಬಳಕೆಯಲ್ಲಿ ಹೆಚ್ಚಳ.
Advertisement
Advertisement
– ಪ್ರಾದೇಶಿಕ ವಾಯು ಸಂಪರ್ಕ ಯೋಜನೆಯಡಿ 56 ಸೇವಾರಹಿತ ವಿಮಾನ ನಿಲ್ದಾಣಗಳು ಹಾಗೂ 31 ಸೇವಾರಹಿತ ಹೆಲಿಪ್ಯಾಡ್ ಗಳ ಸಂಪರ್ಕ.
– ವರ್ಷಕ್ಕೆ 100 ಕೋಟಿ ಟ್ರಿಪ್ಸ್ ನಿರ್ವಹಿಸುವಂತೆ ವಿಮಾನ ನಿಲ್ದಾಣಗಳ ಸಾಮಥ್ರ್ಯ ಹಚ್ಚಳ.
– ಗ್ರಾಮೀಣ ಪ್ರದೇಶಗಳಲ್ಲಿ 5 ಲಕ್ಷ ವೈಫೈ ಸ್ಪಾಟ್‍ಗಳ ಅಳವಡಿಕೆ.
Advertisement
Advertisement
– ಮೂಲಭೂತ ಸೌಕರ್ಯ ನಿರ್ಮಾಣಕ್ಕಾಗಿ 50 ಲಕ್ಷ ಕೋಟಿ ರೂ.
– ಜವಳಿ ವಲಯಕ್ಕೆ 7140 ಕೋಟಿ ರೂ. ಮೀಸಲು.
– ಸ್ಮಾರ್ಟ್ ಸಿಟಿ ಯೋಜನೆಗಾಗಿ 99 ನಗರಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ – 2.04 ಲಕ್ಷ ಕೋಟಿ ರೂ. ವ್ಯಯ.
– 10 ಪ್ರಮುಖ ಪ್ರವಾಸಿ ತಾಣಗಳನ್ನು ಸಾಂಪ್ರದಾಯಿಕ ಪ್ರವಾಸಿ ತಾಣಗಳಾಗಿ ಅಭಿವೃದ್ಧಿ
– 9 ಸಾವಿರ ಕಿ.ಮೀ ಗಿಂತಲೂ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳನ್ನ 2018-19ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಜೇಟ್ಲಿ ಹೇಳಿದ್ರು.
कर्नाटक में विगत वर्षों में रेल की परियोजनाएं #Karnataka #Budget2018 pic.twitter.com/2DUTgFlC72
— Ministry of Railways (@RailMinIndia) February 1, 2018