ನವದೆಹಲಿ: ಸಂಸತ್ ಸದಸ್ಯತ್ವ ಅನರ್ಹತೆ ರದ್ದಾದ ಬಳಿಕ ನಿನ್ನೆ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ (Rahul Gandhi) ಮೋದಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಪರ ಮಾತನಾಡಿದರು. ರಾಹುಲ್ ಗಾಂಧಿ ಲೋಕಸಭೆಯಿಂದ ನಿರ್ಗಮಿಸುವ ವೇಳೆ ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ ನೀಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಆದ್ರೆ ಇದು ಪ್ರೀತಿ ಮತ್ತು ಅಕ್ಕರೆಯ ಸನ್ನೆ ಅಷ್ಟೇ ಎಂದು ಎಐಸಿಸಿ ಮಾಜಿ ವಕ್ತಾರೆ ಹಾಗೂ ಹಾಲಿ ಶಿವಸೇನೆ ಸಂಸದೆ (ಉದ್ಧವ್ ಠಾಕ್ರೆ ಬಣ) ಪ್ರಿಯಾಂಕಾ ಚತುರ್ವೇದಿ (Priyanka Chaturvedi) ಸಮರ್ಥನೆ ಮಾಡಿಕೊಂಡಿದ್ದಾರೆ.
#WATCH | Shiv Sena (UBT) MP Priyanka Chaturvedi says, “It was the responsibility of the PM to come to the parliament and convey the issues in Manipur, but he didn’t. This was the reason why we had to pass a no-confidence motion. I hope today he’ll answer all the questions.” pic.twitter.com/9tCiuM7UxL
— ANI (@ANI) August 10, 2023
Advertisement
ಈ ಕುರಿತು ಇಂದು ಸದನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಮಾತನಾಡುವಾಗ ಬಿಜೆಪಿ ಸಂಸದರು ಅಡ್ಡಿಪಡಿಸುತ್ತಿದ್ದರು. ಆಗ ರಾಹುಲ್ ಗಾಂಧಿ ಮಾಡಿದ್ದು ಪ್ರೀತಿ ವಾತ್ಸಲ್ಯದ ಸೂಚಕವಾಗಿತ್ತು. ಅದರಿಂದ ಏನು ಸಮಸ್ಯೆ? ಅದನ್ನು ಅರ್ಥ ಮಾಡಿಕೊಳ್ಳಲಾರದಷ್ಟು ವಿಫಲರಾಗಿ ಏಕೆ ದ್ವೇಷ ಸಾಧಿಸುತ್ತಿದ್ದಾರೆ? ಎಂದು ಚತುರ್ವೇದಿ ಪ್ರಶ್ನೆ ಮಾಡಿದ್ದಾರೆ.
Advertisement
ರಾಹುಲ್ ಗಾಂಧಿ ಸಂಸದೀಯ ಸ್ಥಾನದಿಂದ ಅನರ್ಹಗೊಂಡ ಬಳಿಕ ಕಾನೂನು ಹೋರಾಟದಿಂದ ಜಯ ಸಾಧಿಸಿ ಮತ್ತೆ ಅರ್ಹತೆ ಪಡೆದುಕೊಂಡಿದ್ದಾರೆ. ಆದರೂ ಅವರು ದ್ವೇಷದ ಮಾತುಗಳನ್ನಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಚಂದ್ರನ ಮೇಲ್ಮೈ ಸಮೀಪಕ್ಕೆ Chandrayaan-3 ಬಾಹ್ಯಾಕಾಶ ನೌಕೆ – ಇಷ್ಟು ದೂರ ಹೋದ್ರೆ ಚಂದ್ರನ ಮೇಲೆ ಲ್ಯಾಂಡಿಂಗ್ ಪಕ್ಕಾ!
Advertisement
Advertisement
ಸದನದಲ್ಲಿ ಏನಾಯಿತು?
ಸಂಸತ್ ಸದಸ್ಯ ಸ್ಥಾನ ಮರುಸ್ಥಾಪನೆ ಬಳಿಕ ಕಲಾಪದಲ್ಲಿ ಭಾಗಿಯಾದ ರಾಹುಲ್ ಗಾಂಧಿ ಮೊದಲ ಬಾರಿ ಮಾತನಾಡಿದರು. ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪರ ಸುದೀರ್ಘವಾಗಿ ಮಾತನಾಡಿದರು. ರಾಹುಲ್ ಗಾಂಧಿ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತು ಆರಂಭಿಸಿದರು. ಸ್ಮೃತಿ ಇರಾನಿ (Smriti Irani) ಮಾತು ಆರಂಭಿಸುತ್ತಿದ್ದಂತೆ ಲೋಕಸಭೆಯಿಂದ ನಿರ್ಗಮಿಸಲು ಮುಂದಾದ ರಾಹುಲ್ ಗಾಂಧಿ, ಹಾದಿ ಮಧ್ಯೆ ಕೆಲವು ಫೈಲ್ ಗಳನ್ನು ಕೆಳಗೆ ಬೀಳಿಸಿಕೊಂಡರು. ಈ ವೇಳೆ ಅದನ್ನು ಎತ್ತಿಕೊಳ್ಳಲು ಮುಂದಾದಾಗ ಅಲ್ಲೇ ಕೂತಿದ್ದ ಬಿಜೆಪಿ ಸಂಸದರು, ರಾಹುಲ್ ಗಾಂಧಿ ನೋಡಿ ನಗಲು ಆರಂಭಿಸಿದ್ದರು. ಇದನ್ನು ಗಮನಿಸಿದ ರಾಗಾ, ಅವರಿಗೆ ಫ್ಲೈಯಿಂಗ್ ಕಿಸ್ ನೀಡಿ ಮುಂದೆ ನಡೆದರು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಈ ಯಾವ ದೃಶ್ಯಗಳು ಲೋಕಸಭೆಯಲ್ಲಿರುವ ಮುಖ್ಯ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದ್ರೆ ಪ್ರತ್ಯಕ್ಷದರ್ಶಿ ಸಂಸದರು ಈ ಬಗ್ಗೆ ಮಾಹಿತಿ ನೀಡಿದ್ದು, ಬಿಜೆಪಿ ಮಹಿಳಾ ಸಂಸದರು ರಾಹುಲ್ ಗಾಂಧಿ ನಡೆ ಅನುಚಿತವಾಗಿತ್ತು ಎಂದು ಆರೋಪಿಸಿದ್ದಾರೆ. ಇದು ಅಶ್ಲೀಲ ಮತ್ತು ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
Web Stories