ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಕೊರಡಿ ಎಸ್ಟೇಟ್ ಬಳಿ ರೆಕ್ಕೆ ಇರುವ ಅಪರೂಪದ ಹಾರುವ ಬೆಕ್ಕೊಂದು ಗೋಚರವಾಗಿ ಜನರನ್ನು ಅಚ್ಚರಿಗೊಳಿಸಿದೆ.
Advertisement
ಹಿಂದೆಂದೂ ಕಂಡುಬರದ ರೆಕ್ಕೆ ಇರುವ ಬೆಕ್ಕೊಂದು ಮಲೆನಾಡಿನಲ್ಲಿ ಕಾಣಿಸಿಕೊಂಡಿದೆ. ಹೆಚ್ಚಾಗಿ ದಟ್ಟಾರಣ್ಯದಲ್ಲಿ ವಾಸ ಮಾಡುವ ಹಾರುವ ಬೆಕ್ಕು ಮೊದಲ ಬಾರಿ ಜನರಿರುವ ಪ್ರದೇಶದಲ್ಲಿ ಕಂಡಿದೆ. ಕಾಡಂಚಿನ ಗ್ರಾಮದ ತೋಟಕ್ಕೆ ಬಂದು ಹಾರುವಾಗ ಸುತ್ತು ಹಾಕಿದ್ದ ತಂತಿ ಬೇಲಿಗೆ ಸಿಲುಕಿ ನರಳಾಡಿದೆ. ಈ ವೇಳೆ ನರಳುತ್ತಿದ್ದ ಬೆಕ್ಕನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿದ್ದಾರೆ. ಬೇಲಿಯಿಂದ ಬೆಕ್ಕನ್ನು ಬಿಡಿಸಿದ ತಕ್ಷಣವೇ ಅದು ಕಾಡಿನೆಡೆಗೆ ಹಾರಿ ಹೋಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
Advertisement
Advertisement
ಈ ತರಹದ ಅಪರೂಪದ ಹಾರುವ ಬೆಕ್ಕನ್ನು ಕಂಡ ಮಲೆನಾಡಿಗರು ಅಚ್ಚರಿ ಪಟ್ಟಿದ್ದಾರೆ. ಅಲ್ಲದೆ ಹಕ್ಕಿಗಳಂತೆ ಎರಡು ರೆಕ್ಕೆಯನ್ನು ಹೊಂದಿರುವ ಬೆಕ್ಕನ್ನು ಜನರು ಕುತೂಹಲದಿಂದ ವೀಕ್ಷಿಸಿದ್ದು, ಮೊಬೈಲ್‍ನಲ್ಲಿ ಈ ಅಪರೂಪದ ಪ್ರಾಣಿಯ ದೃಶ್ಯಾವಳಿಯನ್ನು ಸೆರೆಹಿಡಿದಿದ್ದಾರೆ.
Advertisement
ಪ್ರಸ್ತುತ ಕಾಲಮಾನದಲ್ಲಿ ಅಪರೂಪದ ಹಾರುವ ಬೆಕ್ಕಿನ ಸಂತತಿ ಅಳಿವಿನಂಚಿನಲ್ಲಿದೆ. ಸದ್ಯ ಈ ಅಪರೂಪದ ಹಾರುವ ಬೆಕ್ಕನ್ನು ನೋಡಿ ಜನರು ಖುಷಿ ಪಟ್ಟಿದಾರೆ.
https://www.youtube.com/watch?v=fKktPY1wQQs
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv