-ಜೋಶಿ ಮನವಿಗೆ ಸ್ಪಂದನೆ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆ ಕಾರ್ಯಾರಂಭ
ನವದೆಹಲಿ: ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ, ಮಧ್ಯಕರ್ನಾಟಕ ತ್ವರಿತ ಸಂಪರ್ಕಕ್ಕೆ ಅನುಕೂಲ ಆಗುವಂತೆ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ನಡುವೆ ಅತಿ ಶೀಘ್ರದಲ್ಲೇ ಹೊಸದೊಂದು ವಿಮಾನ ಸೇವೆ ಲಭ್ಯವಾಗಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರ ಪ್ರಯತ್ನದ ಫಲವಾಗಿ FLY19 ವಿಮಾನಯಾನ ಶುರುವಾಗಲಿದೆ.
ಇದೇ ಏಪ್ರಿಲ್ ಎರಡನೇ ವಾರದಿಂದಲೇ FLY19 ವಿಮಾನ ಸೇವೆ ಆರಂಭವಾಗಲಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆಗೆ ಕಾರ್ಯಕ್ಕೆ ಸ್ಥಳಾವಕಾಶ ನೀಡಲಾಗಿದೆ. ಅಂತೆಯೇ FLY19 ಸಂಸ್ಥೆ ಈಗಾಗಲೇ ವಿಮಾನಯಾನ ಸೇವೆಯ ಅಗತ್ಯ ಕಾರ್ಯ ಚಟುವಟಿಕೆ ಸಹ ಆರಂಭಿಸಿದೆ. ಇದನ್ನೂ ಓದಿ: ನೀವು ಕ್ಯಾಶ್‌ನಲ್ಲಿ ವ್ಯವಹಾರ ಮಾಡ್ತೀರಾ? ಹಾಗಿದ್ರೆ ಹೊಸ ಬದಲಾವಣೆ ಓದಿ – ಇಲ್ದಿದ್ರೆ ಬೀಳುತ್ತೆ ಭಾರೀ ದಂಡ
ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಹೈದರಾಬಾದ್ (Hyderabad) ತೆರಳುವ ನಾಗರಿಕರಿಗೆ ತ್ವರಿತ ಪ್ರಯಾಣಕ್ಕೆ ಅನುಕೂಲ ಆಗುವಂತೆ ವಿಮಾನ ಸೇವೆ ಆರಂಭಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಅವರು ಈ ಹಿಂದೆ ಏರ್‌ಲೈನ್ಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಸೆಳೆದಿದ್ದರು. ಅದರಂತೆ FLY19 ಸಂಸ್ಥೆ ಇದೀಗ ಈ ಮಾರ್ಗದಲ್ಲಿ ವಿಮಾನಯಾನಕ್ಕೆ ಅಣಿಯಾಗಿದೆ.
ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿದ FLY19 ಸಂಸ್ಥೆ ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ ವಿಮಾನ ಹಾರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, HYD to HBX: IC3401; 3:00 PM – 4:30 PM HBX to BLR: IC3411; 4:55 PM – 6:15 PM BLR to HBX: IC3412; 6:45 PM – 8:15 PM HBX to HYD: IC3402; 8:35 PM – 9:55 PM ವಿಮಾನಯಾನ ಸೇವೆಯ ವೇಳಾಪಟ್ಟಿ ಸಹ ಬಿಡುಗಡೆ ಮಾಡಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಈ ಸಂಸ್ಥೆಗೆ ಕಾರ್ಯನಿರ್ವಹಿಸಲು ಸ್ಥಳ ಸಹ ನೀಡಲಾಗಿದ್ದು, ಸಂಸ್ಥೆಯು ಅವಶ್ಯಕ ಕಾರ್ಯಗಳನ್ನು ಪ್ರಾರಂಭಿಸಿದೆ. ಇದಕ್ಕಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು FLY19 ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದ್ದಾರೆ.ಇದನ್ನೂ ಓದಿ: ಮೂಲಭೂತ ಸೌಕರ್ಯಕ್ಕಾಗಿ ಮಹಾರಾಣಿ ವಿವಿಯಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

