ಬೆಂಗಳೂರು: ಆಷಾಢ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.
ಸುಮಾರು 10 ಕ್ಕೂ ಹೆಚ್ಚು ವಿವಿಧ ರೀತಿಯ 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಮಂತ್ರ ಪುಷ್ಪಗಳಿಂದ ಪುರೋಹಿತರು ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ಹೂಗಳನ್ನ ಸಮರ್ಪಣೆ ಮಾಡಿದರು.
Advertisement
Advertisement
ಆನೇಕಲ್‍ನ ಹಲವು ಭಕ್ತರು ಯಾಗ ಮಾಡಲು ಪುಷ್ಪಗಳನ್ನ ದೇವಾಲಯಕ್ಕೆ ನೀಡಿದ್ದರು. ಅಲ್ಲದೇ ಸುಮಾರು 2 ಗಂಟೆಗಳ ಕಾಲ ವೇದ ಮಂತ್ರ ಘೋಷಣೆಯೊಂದಿಗೆ ಅಪರೂಪದ ಪುಷ್ಪ ಯಾಗವನ್ನ ನಡೆಸಲಾಯಿತು. ತಿಮ್ಮರಾಯಸ್ವಾಮಿ ದೇವಾಲಯದ ಈ ಅಪರೂಪದ ವಿದ್ಯಮಾನವನ್ನ ಸಾವಿರಾರು ಜನ ಕಣ್ಣು ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.