ಕಳೆಗಟ್ಟಿದ ಚೆಲುವ ಚಾಮರಾಜನಗರ ದಸರಾ ಮಹೋತ್ಸವ – ಗಡಿನಾಡ ಜನತೆಯ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

Public TV
1 Min Read
chamarajanagar flower show

ಚಾಮರಾಜನಗರ: ಬೆಂಗಳೂರು, ಮೈಸೂರಿನಂತಹ ದೊಡ್ಡ ದೊಡ್ಡ ನಗರಗಳಿಗೆ ಫಲಪುಷ್ಪ ಪ್ರದರ್ಶನ ಸೀಮಿತವಾಗಿತ್ತು. ಆದರೆ, ಚೆಲುವ ಚಾಮರಾಜನಗರ ದಸರಾ ಮಹೋತ್ಸವ ಅಂಗವಾಗಿ ಚಾಮರಾಜನಗರದಲ್ಲಿ (Chamarajanagara) ಆಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಗಡಿನಾಡಿನ ಜನತೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ಚೆಲುವ ಚಾಮರಾಜನಗರ ದಸರಾ ಮಹೋತ್ಸವ (Chamarajanagara Dasara) 2024 ಅಂಗವಾಗಿ ಆಯೋಜಿಸಿರುವ ಕಲರ್‌ಫುಲ್ ಫ್ಲವರ್ ಶೋ ಕಣ್ಮನ ಸೆಳೆಯುತ್ತಿದೆ. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಚಾಮರಾಜನಗರ ದಸರಾದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಮಾರ್ಪಟ್ಟಿದ್ದು, ಆಕರ್ಷಣೀಯವಾಗಿದೆ. ವಿವಿಧ ಬಗೆಯ ಪುಷ್ಪಗಳಿಂದ ಪ್ರಾಣಿ ಪಕ್ಷಿಗಳು, ಸಂಗೀತ ಪರಿಕರಗಳು, ಏಳು ಹೆಡೆಯ ಆದಿಶೇಷ, ಹಿಮವದ್ ಗೋಪಾಲಸ್ವಾಮಿ ಸೇರಿದಂತೆ ಹಲವು ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವ ಆಚರಣೆ

chamarajanagar flower show 1

ಕಲಾವಿದರ ಕುಂಚದಲ್ಲಿ ಮೂಡಿರುವ ಸಿನಿ ತಾರೆಯರು ಹಾಗೂ ಗಣ್ಯರ ಭಾವಚಿತ್ರಗಳು ಆಕರ್ಷಣೀಯವಾಗಿವೆ. ಕಲ್ಲಂಗಡಿ ಹಣ್ಣಿನಲ್ಲಿ ರಚಿಸಲಾಗಿರುವ ಮೇರುನಟ ಡಾ.ರಾಜ್‌ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಜಲಜೀವನ್ ಮಿಷನ್ ಹಾಗೂ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಸಾರುವ ಬಣ್ಣ ಬಣ್ಣದ ಪುಷ್ಪಗಳಿಂದ ರಚಿಸಿರುವ ಕಲಾಕೃತಿಗಳು ಜಾಗೃತಿ ಮೂಡಿಸುತ್ತಿವೆ. ಕಾಡಿನಲ್ಲಿ ವಾಸಿಸುವ ಸೋಲಿಗರಿಗೂ ಫಲಪುಷ್ಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ವಿಶೇಷವಾಗಿ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ದೂರದ ಮೈಸೂರು ಬೆಂಗಳೂರಿಗೆ ಹೋಗುತ್ತಿದ್ದ ಜನರು ಇದೀಗ ಸ್ಥಳೀಯವಾಗಿಯೇ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನ ನೋಡಲು ಚಾಮರಾಜನಗರ ಜಿಲ್ಲೆಯ ವಿವಿಧೆಡೆಯಿಂದ ಜನರು ಬರತೊಡಗಿದ್ದಾರೆ. ಇದನ್ನೂ ಓದಿ: ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್

Share This Article