ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ಕ್ರಿಮಿನಾಶಕ ಬಳಸಿದ ರೈತನಿಗೆ ಭಾರೀ ನಷ್ಟ

Public TV
2 Min Read
chikkkaballpura flowers

ಚಿಕ್ಕಬಳ್ಳಾಪುರ: ಮೊದಲೇ ಬಿಸಿಲು ನೆತ್ತಿ ಸುಡುತ್ತಿದೆ. ಜನ ಮಟಮಟ ಮಧ್ಯಾಹ್ನ ಆಚೆ ಕಾಲಿಡಂಗೇ ಇಲ್ಲ.. ಅದರ ನಡುವೆ ಸುಡುಬಿಸಿಲಿನಿಂದ ರೈತರು ಬೆಳೆದ ಬೆಳೆಗಳನ್ನ ಕಾಪಾಡುವುದು ಸವಾಲಿನ ಕೆಲಸ. ರೈತರೊಬ್ಬರು ಸಹ ಬಿಸಿಲಿನ ಮಧ್ಯೆ ಮಕ್ಕಳಂತೆ ಸಾಕಿ ಸಲುಹಿ ಶುಭ್ರ ಬಿಳಿ ಬಣ್ಣದ ಕ್ರಿಸ್ಯಾಂಥಮಮ್ ಎನ್ನುವ ವೆರೈಟಿ ಹೂ ಬೆಳೆದಿದ್ದರು. ಆದರೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಯಡವಟ್ಟಿಗೆ ಇಡೀ ಹೂದೋಟವೇ ಸುಟ್ಟು ಹೋಗಿದೆ. ಇದರಿಂದ ರೈತನ ಬದುಕು ಬೀದಿಗೆ ಬರುವಂತಾಗಿದೆ.

chikkaballapur farmer 1

ಚಿಕ್ಕಬಳ್ಳಾಪುರ (Chikkaballapura)  ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವವರು 30 ಗುಂಟೆ ಜಮೀನಿನಲ್ಲಿ ಕ್ರಿಸ್ಯಾಂಥಮಮ್ ಹೂ ಬೆಳೆದಿದ್ದರು. 3 ತಿಂಗಳ ನಂತರ ಹೂ ಸಹ ಶುಭ್ರ ಬಿಳಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಹೂದೋಟ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಬಿಳಿ ಬಣ್ಣದ ಹೂಗಳೇ ತುಂಬಿ ತುಳುಕಿದ್ದವು. ಆದರೆ ಬಿಳಿ ಬಣ್ಣದ ಹೂಗಳು ಮತ್ತಷ್ಟು ಶೈನಿಂಗ್ ಬರಲಿ ಎಂದು ಮಂಜುನಾಥ್ ಫೆಸ್ಟೆಸೈಡ್ ಶಾಪ್‌ನ ಮಾಲೀಕ ನೀಡಿದ್ದ ಮದ್ದು ಸಿಂಪಡಣೆ ಮಾಡಿದ್ದರು. ಇದನ್ನೂ ಓದಿ: ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

ಮದ್ದು ಸಿಂಪಡನೆ ಮಾಡಿದ ಮಾರನೇ ದಿವೇ ಹೂಗಳೆಲ್ಲವೂ ಬಾಡಿ ಹೋಗಿವೆ. ಅದೇ ಗ್ರಾಮದ ಸಮೀಪದ ಅಬ್ಲೂಡು ಗ್ರಾಮದ ಬಳಿ ಇರುವ ಫೆಸ್ಟೆಸೈಡ್ ಶಾಪ್‌ನಲ್ಲಿ ಮಂಜುನಾಥ್ ತಾವು ಯಾವಾಗಲೂ ಬಳಸುತ್ತಿದ್ದ ಮದ್ದನ್ನೇ ಕೊಡುವಂತೆ ಕೇಳಿದ್ದರು. ಆದರೆ ಮಾಲೀಕ ಅದು ಬೇಡ ಇದು ತಗೊಂಡು ಹೋಗಿ ಹೂ ಮತ್ತಷ್ಟು ಶೈನಿಂಗ್ ಬರುತ್ತದೆ ಎಂದು ಮತ್ತೊಂದು ಕಂಪನಿಯ ಮದ್ದು ಕೊಟ್ಟಿದ್ದರು. ಅದರಿಂದಲೇ ಹೂವು ಬಾಡಿ ಹೋಗಿ ಸುಟ್ಟು ಹೋದಂತಾಗಿದೆ ಎಂದು ಮಂಜುನಾಥ್ ದೂರಿದ್ದಾರೆ. ಇದನ್ನೂ ಓದಿ: ರನ್ಯಾಗೇ ಜೈಲೇ ಗತಿ -ಜಾಮೀನು ಅರ್ಜಿ ವಜಾ

ಮಕ್ಕಳಿಗಿಂತ ಹೆಚ್ಚಾಗಿ ಸಾಲಸೋಲ ಮಾಡಿ 5-6 ಲಕ್ಷ ರೂ. ಖರ್ಚು ಮಾಡಿ ಬೆಳೆದ ಹೂದೋಟ ಒಂದೇ ದಿನಕ್ಕೆ ಬಾಡಿ ಹೋಗಿದೆ. ಇದರಿಂದ ಇರೋ ಬರೋ ಹೂವನ್ನ ಕಿತ್ತು ಈಗ ತಿಪ್ಪೆಗೆ ಎಸೆಯುವಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

ಕುಂಬಾರನಿಗೆ ವರುಷ ದೊಣ್ಣಗೆ ನಿಮಿಷ ಎಂಬಂತೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಅದೊಂದು ಯಡವಟ್ಟಿಗೆ ಇಡೀ ಹೂದೋಟವೋ ನಾಶವಾಗಿದೆ. ಹೀಗಾಗಿ ಸಾಲಸೋಲ ಮಾಡಿ ಬೆಳೆದಿದ್ದ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಸಾಲಕ್ಕೆ ಸಿಲುಕಿ ಬೀದಿಗೆ ಬರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ಕೊಡಿಸುವಂತೆ ರೈತ ಮುಖಂಡ ರವಿ ಪ್ರಕಾಶ್ ಆಗ್ರಹಿಸಿದ್ದಾರೆ.

Share This Article