ಡಿಸ್ಪುರ್: ಅಸ್ಸಾಂ ಮತ್ತು ಮೇಘಾಲಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗಟ್ಟಿದ್ದು, 31 ಜನರು ಮೃತಪಟ್ಟಿದ್ದಾರೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ 2 ರಾಜ್ಯಗಳಲ್ಲೂ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಅಷ್ಟೇ ಅಲ್ಲದೇ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
Advertisement
Advertisement
ಅಸ್ಸಾಂನ 28 ಜಿಲ್ಲೆಗಳಲ್ಲಿ ಕನಿಷ್ಠ 19 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೇ ಹೊಸದಾಗಿ ರೂಪುಗೊಂಡ ಬಜಾಲಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದೆ. ಬ್ರಹ್ಮಪುತ್ರ ಮತ್ತು ಗೌರಂಗಾ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೂ ಮೀರಿ ಹರಿಯುತ್ತಿದೆ.
Advertisement
At 6 am today,Hon PM Shri @narendramodi ji called me to enquire about #flood situation in #Assam. While expressing his concerns over the hardships being faced by people due to this natural calamity,Hon PM assured all help from Central Govt.
Humbled by his reassuring generosity.
— Himanta Biswa Sarma (@himantabiswa) June 18, 2022
ಕಳೆದ 3 ದಿನಗಳಿಂದ ಕೇವಲ ಅಸ್ಸಾಂ ರಾಜ್ಯದಲ್ಲೇ 17 ಜನರು ಮೃತಪಟ್ಟಿದ್ದು, 19 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ
Advertisement
ಮಳೆಯಿಂದಾಗಿ ಜಲಾವೃತಗೊಂಡಿರುವುದರಿಂದ ರಾಜಧಾನಿ ಗುವಾಹಟಿಯ ಬಹುತೇಕ ಭಾಗಗಳು ಸ್ಥಗಿತಗೊಂಡಿವೆ. ಗುವಾಹಟಿ ನಗರದಲ್ಲಿ ಹಲವೆಡೆ ಭೂಕುಸಿತಗಳು ವರದಿಯಾಗಿದ್ದು, ನೂನ್ಮತಿ ಪ್ರದೇಶದ ಅಜಂತನಗರದಲ್ಲಿ ಮೂವರು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಉಗ್ರರಿಂದ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಹತ್ಯೆ