ಹಾವೇರಿ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ, ಮುನವಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಜಲಾವೃತಗೊಂಡಿದ್ದ ಮೆಕ್ಕೆಜೋಳ, ಕಬ್ಬು ಹಾಗೂ ಹತ್ತಿಯನ್ನ ಪರಿಶೀಲನೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ಮಳೆ ಬಂದರೆ ಸಾಕು ಕೆರೆ ಹಾಗೂ ಹಳ್ಳದ ನೀರು ಬಂದು ಬೆಳೆ ಸಂಪೂರ್ಣ ಹಾನಿಯಾಗಿತ್ತದೆ ಎಂದು ರೈತರು ಇದೇ ವೇಳೆ ಹೇಳಿದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ
Advertisement
Advertisement
ಅಧಿಕಾರಿಗಳಿಗೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋವನ್ನು ಸಹ ತೋರಿಸಿದರು. ಕೇಂದ್ರ ನೆರೆ ಅಧ್ಯಯನ ತಂಡದ ಅಧಿಕಾರಿಗಳು, ನಾಗನೂರು, ಕೂಡಲ, ವರದಹಳ್ಳಿ, ಮಂಟಗಣಿ ಸೇರಿದಂತೆ ಹಲವು ರಸ್ತೆ, ಬೆಳೆಯ ಹಾನಿ ಸಮೀಕ್ಷೆ ನೀಡೆಸಿದರು. ಹೆದ್ದಾರಿ ರಸ್ತೆ ಸಾರಿಗೆ ಮಂತ್ರಾಲಯದ ಅಧಿಕಾರಿ ಎಸ್.ಪಿ.ವಿಜಯಕುಮಾರ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿ ಕೈಲಾಸ ಸಂಕ್ಲಾ ನೇತೃತ್ವದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಸಾಥ್ ನೀಡಿದರು.