ಚೆನ್ನೈ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈ ಹಾಗೂ ಅದರ ಉಪನಗರದಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ ಮತ್ತು ಭಾನುವಾರ ಕೂಡ ಮಳೆರಾಯ ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ. 2015ರ ಬಳಿಕ ಆದ ಅತೀ ಹೆಚ್ಚು ಮಳೆ ಇದಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಚೆನ್ನೈ ಸುತ್ತಲೂ ಜಲಾವೃತವಾಗಿದ್ದು ಎರಡು ನಗರದ ಜಲಾಶಯಗಳನ್ನು ತೆರೆಯಲು ಸಿದ್ಧರಾಗಿರುವ ಅಧಿಕಾರಿಗಳು ಭಾನುವಾರ ಜನರಿಗೆ ಪ್ರಾಥಮಿಕ ಪ್ರವಾಹದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನ್ಯುಮೋನಿಯಾದಿಂದ ಮೃತಪಟ್ಟ ಪತ್ನಿಯ ನೆನಪಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ ಪತಿ!
Advertisement
Advertisement
ಚೆನ್ನೈ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಚೆಂಬರಂಬಾಕ್ಕಂ ಮತ್ತು ಪುಝಲ್ ಜಲಾಶಯಗಳಿಂದ ಹೆಚ್ಚುವರಿ ಮಳೆ ನೀರನ್ನು ಹೊರಬಿಡಲಾಗುವುದಾಗಿ ಅಧಿಕಾರಿಗಳು ಪ್ರಕಟಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡ: ದಾರಿಯಲ್ಲಿ ಐದು ಗ್ರಾನೈಡ್ ಪತ್ತೆ!
Advertisement
Tamil Nadu | Severe waterlogging in MMDA colony following heavy rainfall in Chennai
IMD predicts ‘moderate’ rain in the city till 11th November pic.twitter.com/gA35s3yak9
— ANI (@ANI) November 7, 2021
ಪ್ರಾಥಮಿಕ ಪ್ರವಾಹದ ಎಚ್ಚರಿಕೆ ನೀಡಿರುವ ರಾಜ್ಯ ಜಲಸಂಪನ್ಮೂಲ ಅಧಿಕಾರಿಗಳು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಿಸಲು ಕಾಂಚೀಪುರಂ ಮತ್ತು ತಿರುವಳ್ಳೂರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕರ ಸಂಘಕ್ಕೆ ವಾರ್ಷಿಕ 1 ಲಕ್ಷ ರೂ. ಸಹಾಯಧನ: ಸಚಿವ ಕೆ.ಗೋಪಾಲಯ್ಯ
Tamil Nadu | Traffic movement affected on Guindy-Koyambedu road due to waterlogging as a result of heavy rainfall in Chennai pic.twitter.com/HWVu2UtfZM
— ANI (@ANI) November 7, 2021
ಶನಿವಾರ ಬೆಳಿಗ್ಗೆಯಿಂದ ಚೆನ್ನೈ, ಕಾಂಚೀಪುರಂ ಮತ್ತು ತಿರುವಳ್ಳೂರು ಜಿಲ್ಲೆಗಳ ಹಲವಾರು ಉಪನಗರಗಳಲ್ಲಿ ಮಳೆಯಾಗಿದ್ದು, ರಾತ್ರಿಯಿಂದಲೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.