ವಾಷಿಂಗ್ಟನ್: ಅಮೇರಿಕಾ ಪ್ರವಾಸಕ್ಕೆ ಹೋಗಲು ಪ್ಲಾನ್ ಹೊಂದಿರುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಹೇರಲಾಗಿದ್ದ ನಿರ್ಬಂಧವನ್ನು ಇದೀಗ ದೇಶವು ಸಡಿಲಗೊಳಿಸಲಾಗಿದ್ದು, ಸಂಪೂರ್ಣ ವ್ಯಾಕ್ಸಿನ್ ಪಡೆದಿರುವವರು ನವೆಂಬರ್‌ನಿಂದ ಯುಎಸ್‍ಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.
Advertisement
ಭಾರತದಿಂದ ಅಮೇರಿಕಾಗೆ ಪ್ರಯಾಣಿಸುವ ಪ್ರಯಾಣಿಕರು ಇನ್ನೂ ಮುಂದೆ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರದ ಜೊತೆಗೆ ಯುಎಸ್‍ಗೆ ಪ್ರಯಾಣಿಸಬಹುದಾಗಿದೆ ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ. 2020 ಆರಂಭದಲ್ಲಿ ಕೊರೊನಾ ವೈರಸ್‍ನಿಂದಾಗಿ ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯುಎಸ್‍ಗೆ ವಿದೇಶಿ ಪ್ರಯಾಣಿಕರ ಪ್ರವೇಶವನ್ನು ನಿಷೇಧಿಸಿದ್ದರು. ಇದೀಗ ಈ ನಿಯಮಾವಳಿಗಳು ಬದಲಾಗಿದೆ. ಇದನ್ನೂ ಓದಿ: ಕಾಲಿನಲ್ಲಿ ತುಳಿಯುವುದಲ್ಲದೆ ನೆಕ್ಕಿ ರಸ್ಕ್ ಪ್ಯಾಕ್ – ವೀಡಿಯೋ ವೈರಲ್
Advertisement
Advertisement
ಈ ಬಗ್ಗೆ ಜೆಫ್ ಜೈಂಟ್ಸ್ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾವು ಅಂತರಾಷ್ಟ್ರೀಯ ವಿಮಾನ ಪ್ರಯಾಣ ವ್ಯವಸ್ಥೆಯ ಬಗ್ಗೆ ಘೋಷಿಸುತ್ತಿದ್ದೇವೆ. ಈ ವ್ಯವಸ್ಥೆಯು ಯುನೈಟೆಡ್ ಸ್ಟೇಟ್‍ಗೆ ಆಗಮಿಸುವ ಪ್ರಯಾಣಿಕರ ಮೇಲೆ ಕೋವಿಡ್-19 ಹರಡುವಿಕೆಯನ್ನು ತಡೆಯಲು ಕೆಲವು ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದು ಅಮೇರಿಕರನ್ನು ರಕ್ಷಿಸುವುದರ ಜೊತೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿವಾಗಿರಿಸುತ್ತದೆ. ನವೆಂಬರ್ ನಿಂದ ಅಮೇರಿಕಾಕ್ಕೆ ಪ್ರಯಾಣಿಸುವವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಖಡ್ಡಾಯವಾಗಿದೆ. ಯುಎಸ್‍ಗೆ ಹೋಗುವ ವಿಮಾನ ಹತ್ತುವ ಮುನ್ನ ಕೋವಿಡ್-19 ಲಸಿಕೆ ಪಡೆದಿದಕ್ಕೆ ಪುರಾವೆಗಳನ್ನು ತೋರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಸೆ.24 ರ ವರೆಗೆ ಭಾರೀ ಮಳೆ ಸಾಧ್ಯತೆ
Advertisement