ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ (LokSabha Elections) ಮೋದಿ ಕಟ್ಟಿಹಾಕಲು ಹೊರಟಿರೋ ವಿಪಕ್ಷಗಳು ಬೆಂಗಳೂರಲ್ಲಿ (Bengaluru) ಭರ್ಜರಿ ಶಕ್ತಿಪ್ರದರ್ಶನ ನಡೆಸ್ತಿವೆ. ಬೆಂಗ್ಳೂರಿನಲ್ಲಿಂದು 24 ಪಕ್ಷಗಳ ನಾಯಕರು ಮಹಾಮೈತ್ರಿ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಮಹಾಘಟಬಂಧನ್ ಸಭೆಗೆ ಫ್ಲೆಕ್ಸ್, ಪೋಸ್ಟರ್‌ಗಳನ್ನ ಅಳವಡಿಸಲಾಗಿದ್ದು, ರಸ್ತೆಯುದ್ದಕ್ಕೂ ರಾರಾಜಿಸುತ್ತಿವೆ. ಸಭೆಗೆ ಹಾಜರಾಗುವ ಗಣ್ಯಮಾನ್ಯರಿಗೆ ಫ್ಲೆಕ್ಸ್ ಮೂಲಕ ಭರ್ಜರಿ ಸ್ವಾಗತ ಕೋರಲಾಗಿದೆ. ಈ ನಡುವೆ ಕಿಡಿಗೇಡಿಗಳು ಬಿಹಾರದ ಸಿಎಂ ನಿತೀಶ್ ಕುಮಾರ್‌ಗೆ (Nitish Kumar) ನೆಗೆಟಿವ್ ಬರಹಗಳನ್ನೊಳಗೊಂಡ ಫ್ಲೆಕ್ಸ್ ಮೂಲಕ ಸ್ವಾಗತ ಕೋರಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಬಿಹಾರದಲ್ಲಿ ಕಟ್ಟಲಾಗಿದ್ದ ಸುಲ್ತಾನಗಂಜ್ ಬ್ರಿಡ್ಜ್ ಮುರಿದುಬಿದ್ದಿತ್ತು. ಅದನ್ನೇ ಪ್ತಸ್ತಾಪಿಸಿ ಫ್ಲೆಕ್ಸ್ ಹಾಕಿರೋ ಕಿಡಿಗೇಡಿಗಳು, ಬ್ರಿಡ್ಜ್ ನೋಡಿಕೊಳ್ಳಲಾಗದವರು ಪ್ರಧಾನಿಯಾಗ್ತಾರಾ? ಅಸ್ಥಿರ ಪ್ರಧಾನಮಂತ್ರಿ ಸ್ಪರ್ಧಿ ಅಂತ ಟೀಕಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಬಗ್ಗೆ ಶಿಕ್ಷಕನಿಂದ ಅವಹೇಳನಕಾರಿ ಪೋಸ್ಟ್- ಶಿಕ್ಷಣ ಸಚಿವರಿಗೆ ಸುರೇಶ್ ಕುಮಾರ್ ದೂರು
ಈ ಹಿಂದೆ ಬಿಜೆಪಿ ವಿರುದ್ಧ `ಪೇ ಸಿಎಂ’ ಹಾಗೂ 40% ಸರ್ಕಾರ ಅಂತಾ ಪೋಸ್ಟರ್ ಅಂಟಿಸಲಾಗಿತ್ತು. ಇದೀಗ ಮಹಾಘಟಬಂಧನ್ ಸಭೆಗೆ ಬರುತ್ತಿರುವ ಗಣ್ಯರಿಗೆ ನೆಗೆಟೀವ್ ಪೋಸ್ಟರ್ ಮೂಲಕ ಸ್ವಾಗತಿಸುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ವಾಸುರನ್ನ ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಿ – ಸಿಎಂ ಬೆಂಬಲಿಗರಿಂದ ಬಹಿರಂಗ ಪತ್ರ
ಪ್ರತಿಪಕ್ಷ ನಾಯಕರ ಸಭೆ ವಿರೋಧಿಸಿ ಕಾವೇರಿ ಜಂಕ್ಷನ್‌ನಿಂದ ವಿಂಡ್ಸರ್ ಮ್ಯಾನರ್ ರಸ್ತೆವರೆಗೂ ನೆಗೆಟಿವ್ ಪೋಸ್ಟರ್ ಹಾಕಿದ್ದಾರೆ. ಅಷ್ಟೇ ಅಲ್ಲದೆ ರೇಸ್‌ಕೋರ್ಸ್ ಬಳಿ ತಾಜ್ ವೆಸ್ಟೆಂಡ್ ಹೋಟೆಲ್ ಬಳಿಯೂ ಪೋಸ್ಟರ್ ಅಂಟಿಸಿ ಸಭೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ವಿವಾದದ ನಂತರ ಸದ್ಯ ಪೋಸ್ಟರ್‌ಗಳನ್ನ ತೆರವುಗೊಳಿಸಲಾಗಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]