ಮೈಸೂರು: ಲೋಕೋಪಯೋಗಿ ಸಚಿವ ಡಾ.ಹೆಚ್‍ಸಿ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅವರಿಗೆ ಡಾಕ್ಟರೇಟ್ ಪದವಿ ಪಡೆದಿದ್ದಾರಾ..? ಅವರು ಇನ್ಮುಂದೆ ಬರೀ ಸುನೀಲ್ ಬೋಸ್ ಅಲ್ಲ ಡಾ.ಸುನೀಲ್ ಬೋಸ್ ಎನ್ನುವಂತಾಗಿದೆ.
ಇದೇನಪ್ಪಾ ಸುನೀಲ್ ಬೋಸ್ ಯಾವಾಗ ಡಾಕ್ಟರೇಟ್ ಪಡೆದರು? ಯಾವ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ರು? ಅಥವಾ ಅವರ ಉತ್ತಮ ಸೇವೆ ಗುರುತಿಸಿ ಯಾವುದಾದರೂ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಬಿಡ್ತಾ ಅಂತಾ ನೀವು ಪ್ರಶ್ನೆ ಕೇಳಿದರೆ ನಮ್ಮ ಬಳಿಯೂ ಉತ್ತರ ಇಲ್ಲ.
Advertisement
ಈ ಪ್ರಶ್ನೆಗೆ ಉತ್ತರ ಗೊತ್ತಿರುವುದು ಮೈಸೂರು ಜಿಲ್ಲೆಯ ಛಲವಾದಿ ಮಹಾ ಸಭಾ ಸಂಘಟನೆಗೆ ಮಾತ್ರ. ಏಕೆಂದರೆ ಆ ಸಂಘಟನೆಯೇ ತನ್ನ ಪೋಸ್ಟರ್ ಹಾಕಿ ಡಾ.ಸುನೀಲ್ ಬೋಸ್ ಅವರಿಗೆ ಶುಭಾಶಯ ಕೋರಿದೆ. ಟಿ. ನರಸೀಪುರದಲ್ಲಿ ಬಹುತೇಕ ಫ್ಲೆಕ್ಸ್, ಪೋಸ್ಟರ್ ಗಳಲ್ಲಿ ಡಾ.ಸುನಿಲ್ ಬೋಸ್ ಎಂದೇ ಬರೆಯಲಾಗಿದೆ.
Advertisement
ಛಲವಾದಿ ಮಹಾಸಭಾದ ಸಂಘಟಕರು ಡಾಕ್ಟರೇಟ್ ಕೊಡುವ ಮೂಲಕ ಫ್ಲೆಕ್ಸ್ ಗಳಲ್ಲಿ ಸುನಿಲ್ ಬೋಸ್ ಅವರನ್ನು ಹೊಗಳಿ ತಮ್ಮ ನಾಯಕನ ಮೇಲಿನ ಪ್ರೀತಿ ಪ್ರದರ್ಶಿಸಿದ್ದಾರೆ. ಸಮಾಜಕ್ಕೆ ಉತ್ತಮ ಸೇವೆ ಹಾಗೂ ಕೊಡುಗೆಗಳನ್ನ ನೀಡುವ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗುತ್ತೆ. ಆದರೆ ಇತ್ತೀಚೆಗಷ್ಟೆ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸುನಿಲ್ ಬೋಸ್ ಅವರಿಗೆ ಈ ರೀತಿ ಡಾಕ್ಟರೇಟ್ ಸೇರಿಸಿದ್ದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಟಿ.ನರಸೀಪುರದ ಜನರಲ್ಲಿ ಮೂಡಿದೆ.