Gujarat Election
ಗುಜರಾತ್, ಹಿಮಾಚಲದಲ್ಲಿ ಬಿಜೆಪಿಗೆ ಮುನ್ನಡೆ- ವಿ ಚಿಹ್ನೆ ತೋರಿಸಿ ನಗು ಬೀರಿದ ಮೋದಿ

ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ಹೆಜ್ಜೆ ಹಾಕುತ್ತಿರೋ ಹಿನ್ನೆಲೆಯಲ್ಲಿ ಇಂದು ಮೋದಿ ಸಂಸತ್ ಒಳಗೆ ಹೋಗುವ ಮುನ್ನ ಮಾಧ್ಯಮಗಳತ್ತ ‘ವಿ'(ವಿಜಯ) ಚಿಹ್ನೆಯನ್ನ ತೋರಿಸಿ ನಗೆ ಬೀರಿದ್ರು.
ಗುಜರಾತ್‍ನಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು, ಜಯ ಸಾಧಿಸುವತ್ತ ಸಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಗುಜರಾತ್‍ನ ಒಟ್ಟು 182 ಕೇತ್ರಗಳಲ್ಲಿ ಬಿಜೆಪಿ 103 ಹಾಗೂ ಕಾಂಗ್ರೆಸ್ 75 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಹಿಮಾಚಲಪ್ರದೇಶದಲ್ಲಿ ಒಟ್ಟು 68 ಕೇತ್ರಗಳಲ್ಲಿ ಬಿಜೆಪಿ 45 ಹಾಗೂ ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ.
