ಕಳೆದ ನಾಲ್ಕೈದು ತಿಂಗಳಿಂದ ಕನ್ನಡ ಚಿತ್ರೋದ್ಯಮದಲ್ಲಿ ಬ್ಯಾನ್ ಪದವು ಪದೇ ಪದೇ ಬಳಕೆಯಾಗುತ್ತಿದೆ. ಅದರಲ್ಲೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ನಟ ಅನಿರುದ್ಧ ವಿಷಯದಲ್ಲಿ ಈ ಪ್ಯಾನ್ ಪದ ಬಳಕೆ ಅತೀ ಹೆಚ್ಚು ಚಾಲ್ತಿಯಲ್ಲಿದೆ. ಅಷ್ಟಕ್ಕೂ ಇವರನ್ನು ಬ್ಯಾನ್ ಮಾಡಲು ಸಾಧ್ಯವಾ? ಹಾಗಾದರೆ ಬ್ಯಾನ್ ಮಾಡೋರು ಯಾರು? ಯಾವುದಕ್ಕಾಗಿ ಬ್ಯಾನ್ ಮಾಡುತ್ತಾರೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಚಿತ್ರೋದ್ಯಮದಲ್ಲೇ ಕೆಲವರಿಗೆ ಮೂಡಿವೆ.
Advertisement
ಕನ್ನಡ ಹಾಗೂ ಕನ್ನಡ ಚಿತ್ರೋದ್ಯಮದ ಬಗ್ಗೆ ರಶ್ಮಿಕಾ ಮಂದಣ್ಣಗೆ ಅಸಡ್ಡೆ ಅನ್ನುವ ಕಾರಣಕ್ಕಾಗಿ ಚಿತ್ರೋದ್ಯಮದಿಂದ ಬ್ಯಾನ್ ಮಾಡಲಾಗುತ್ತಿದೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತು. ಕೊನೆಗೂ ಅದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ತುಳಿಯಿತು. ರಶ್ಮಿಕಾರನ್ನು ಬ್ಯಾನ್ ಮಾಡ್ತೀರಾ? ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷರನ್ನೂ ಕೇಳಿ ಆಯಿತು. ಅಧ್ಯಕ್ಷರಿಗೂ ಈ ವಿಷಯ ಕೇಳಿ ಗಾಬರಿ. ಬ್ಯಾನ್ ಮಾಡುವುದು ಯಾಕೆ? ವಾಣಿಜ್ಯ ಮಂಡಳಿಗೆ ಬ್ಯಾನ್ ಮಾಡುವಂಥ ಅಧಿಕಾರ ಇದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಇದನ್ನೂ ಓದಿ: ಕರ್ನಾಟಕದ ಹುಡುಗಿಯ ಜೊತೆ ಸಲ್ಮಾನ್ ಖಾನ್‌ಗೆ ಪ್ಯಾರ್
Advertisement
Advertisement
ಅನಿರುದ್ಧ ವಿಚಾರದಲ್ಲೂ ಅಷ್ಟೇ. ಎರಡು ವರ್ಷಗಳ ಕಾಲ ಅವರನ್ನು ಕಿರುತೆರೆ ಜಗತ್ತಿನಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡಿತು. ವಿಷಯ ದೊಡ್ಡದಾಗುತ್ತಿದ್ದಂತೆಯೇ ಕಿರುತೆರೆ ನಿರ್ಮಾಪಕರ ಸಂಘವು ನಾವು ಬ್ಯಾನ್ ಪದವನ್ನು ಬಳಸಿಲ್ಲ ಎಂದು ಸ್ಪಷ್ಟನೆ ನೀಡಿತು. ಆದರೂ, ಬ್ಯಾನ್ ಪದವನ್ನು ಪದೇ ಪದೇ ಬಳಸಲಾಗುತ್ತಿದೆ. ಅಸಲಿಯಾಗಿ ಕನ್ನಡ ಸಿನಿಮಾ ರಂಗದಲ್ಲಿ ‘ಬ್ಯಾನ್’ ಪದಕ್ಕೆ ‘ಬ್ಯಾನ್’ ಮಾಡಿದ ಇಂಟ್ರಸ್ಟಿಂಗ್ ಘಟನೆಯೊಂದು ನಡೆದಿದೆ. ಆವತ್ತಿಂದ ಸ್ಯಾಂಡಲ್ ವುಡ್ ನಲ್ಲಿ ಬ್ಯಾನ್ ಪದವನ್ನು ಬ್ಯಾನ್ ಮಾಡಲಾಗಿದೆ.
Advertisement
ನಿಖಿತಾ ತುಕ್ರಾಲ್ ವಿಷಯದಲ್ಲಿ ಆಗಿನ ನಿರ್ಮಾಪಕರ ಸಂಘವು ಆ ನಟಿಯನ್ನು ಬ್ಯಾನ್ ಮಾಡಲಾಗಿತ್ತು. ಅಧಿಕೃತವಾಗಿಯೇ ನಿಖಿತಾರನ್ನು ಕನ್ನಡ ಸಿನಿಮಾ ರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಪದವನ್ನು ಬಳಸಲಾಗಿತ್ತು. ಆಗ ಅದಕ್ಕೆ ತೀವ್ರ ವಿರೋಧವೂ ವ್ಯಕ್ತವಾಯಿತು. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ನಿರ್ಮಾಪಕರ ಸಂಘದ ಅಧ್ಯಕ್ಷರೇ ಖುದ್ದಾಗಿ ಮಾಧ್ಯಮಗಳ ಮುಂದೆ ಬಂದು ಕನ್ನಡ ಸಿನಿಮಾ ರಂಗದಲ್ಲಿ ‘ಬ್ಯಾನ್’ ಪದಕ್ಕೆ ‘ಬ್ಯಾನ್’ ಮಾಡಿದ್ದೇವೆ’ ಎಂದು ಘೋಷಿಸಿ ಬಿಟ್ಟರು. ಹಾಗಾಗಿ ಕನ್ನಡ ಚಿತ್ರೋದ್ಯಮದಲ್ಲಿ ಯಾರನ್ನೂ ಬ್ಯಾನ್ ಮಾಡಲು ಸಾಧ್ಯವಿಲ್ಲ. ಬ್ಯಾನ್ ಇಲ್ಲಿ ಬ್ಯಾನ್ ಆಗಿದೆ.