ಬೆಂಗಳೂರು: ಮುಂಜಾನೆ ಆಟದ ಮೈದಾನದಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಾ ಆಟವಾಡುತ್ತಿದ್ದ ಮಕ್ಕಳು ಭಾರತ ಸ್ವಾತಂತ್ರ್ಯ ಅಮೃತಮಹೋತ್ಸದ ಸಂಭ್ರಮಕ್ಕೆ ಸಾಕ್ಷಿಯಾದರು.
Advertisement
ಬೆಂಗಳೂರಿನ ಬಸವೇಶ್ವರನಗರದ ಕಪಿಲ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಮಕ್ಕಳಲ್ಲಿ ದೇಶಪ್ರೇಮ ಮೂಡಿಸುವ ಪ್ರಯತ್ನ ನಡೆಯಿತು.
Advertisement
Advertisement
ಎಂದಿನಂತೆ ಮುಂಜಾನೆಯಿಂದಲೇ ಕ್ರಿಕೆಟ್ ಕೌಶಲ್ಯ ತರಬೇತಿ ನಡೆಯುತ್ತಿತ್ತು. ದೈಹಿಕ ಸಾಮರ್ಥ್ಯ ಹೆಚ್ಚಿಸುವ ವಿಶೇಷ ತರಬೇತಿ ನೀಡಲಾಗುತ್ತಿತ್ತು. ಎಲ್ಲ ಕಡೆ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
Advertisement
ನಿನ್ನೆಯಿಂದ ಮೂರು ದಿನಗಳ ಕಾಲ ʼಹರ್ ಘರ್ ತಿರಂಗʼ ಅಭಿಯಾನ ನಡೆಯುತ್ತಿದೆ. ಹೀಗಾಗಿ ಕ್ರಿಕೆಟ್ ತರಬೇತಿಗೆ ಅಲ್ಪವಿರಾಮ ನೀಡಿ, ಹಿರಿಯರಿಂದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಪ್ರಯತ್ನ ನಡೆಯಿತು.
ಕ್ರಿಕೆಟ್ ಕೊಚಿಂಗ್ ಗೆ ಬರೋ 200 ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರು ಈ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಧ್ಜಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ಇದನ್ನೂ ಓದಿ: ಧ್ವಜಾರೋಹಣಕ್ಕೆ ಈದ್ಗಾ ಮೈದಾನದಲ್ಲಿ ಸಿದ್ಧತೆ- ಅಹಿತಕರ ಘಟನೆ ನಡೆಯದಂತೆ ಖಾಕಿ ಭದ್ರತೆ
ಹಿರಿಯ ನಾಗರಿಕರಾದ ಬಾಲಸುಬ್ರಹ್ಮಣ್ಯಂ ಮತ್ತು ಕ್ರಿಕೆಟ್ ಕೋಚಿಂಗ್ ಗೆ ಬರೋ ಪುಟಾಣಿ ಬಾಲಕ ತಿರಂಗ ಧ್ವಜಾರೋಹಣ ಮಾಡಿದ್ರು. ಮಕ್ಕಳಿಗೆ ತರಬೇತಿ ಮಧ್ಯೆ ರಾಷ್ಟ್ರಪ್ರೇಮ ಮೂಡಿಸುವ ಸಲುವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು ಉತ್ಸಾಹದಲ್ಲಿ ಪಾಲ್ಗೊಂಡರು.
ಕಪಿಲ್ ಕ್ರಿಕೆಟ್ ಕ್ಲಬ್ ನ ನರಸಿಂಹಮೂರ್ತಿ, ಮಹೇಶ್, ವಿಲಿಯಮ್ಸ್, ಮುಕುಂದ್, ನಾರಾಯಣ್ , ಸಾಗರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.