ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ (Gundlupet) ತಾಲೂಕಿನ ಬಂಡೀಪುರದಲ್ಲಿ (Bandipur Safari) ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಒಂದಲ್ಲ, ಎರಡಲ್ಲ, ಐದು ಹುಲಿಗಳ ದರ್ಶನವಾಗಿದೆ. ಹೊಸ ವರ್ಷದ ಮುನ್ನಾ ದಿನ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ನಾಲ್ಕು ಮರಿಗಳೊಂದಿಗೆ ತಾಯಿ ಹುಲಿ ಸಂಚಾರದ ಅಪರೂಪದ ದೃಶ್ಯ ಕಂಡುಬಂದಿದೆ. ಹೊಸ ವರ್ಷಾಚರಣೆಯ ಮೂಡ್‌ನಲ್ಲಿದ್ದ ಪ್ರವಾಸಿಗರಿಗೆ ಮರಿ ಹುಲಿಗಳು ಮುದ ನೀಡಿವೆ. ಇದನ್ನೂ ಓದಿ: ಹೊಸ ವರ್ಷದ ಆರಂಭದ ತಿಂಗಳಲ್ಲೇ ಬಸ್ ಟಿಕೆಟ್ ದರ ಏರಿಕೆಯಾಗುತ್ತಾ?
ಪ್ರವಾಸಿಗರ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಹೊಸ ವರ್ಷದ ಹಿನ್ನೆಲೆ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯವಾಗಿ ಏರಿಕೆಯಾಗಿದೆ. ಇದನ್ನೂ ಓದಿ: ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆಯಾಗಬಹುದಲ್ಲವೇ: ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಪ್ರಶ್ನೆ